ವಾಜಪೇಯಿ ಶ್ರದ್ಧಾಂಜಲಿಗೆ ವಿರೋಧ: ಎಂಐಎಂ ಕಾರ್ಪೊರೇಟರ್‌ಗೆ ಥಳಿತ

Update: 2018-08-17 18:14 GMT

ಔರಂಗಾಬಾದ್(ಮಹಾರಾಷ್ಟ್ರ),ಆ.17: ಶುಕ್ರವಾರ ಇಲ್ಲಿಯ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸುವ ನಿರ್ಣಯವನ್ನು ವಿರೋಧಿಸಿದ ಮಜ್ಲಿಸ್-ಎ-ಇತ್ತೆಹಾದ್ ಉಲ್ ಮುಸ್ಲಿಮೀನ್(ಎಂಐಎಂ) ಕಾರ್ಪೊರೇಟರ್ ಸೈಯದ್ ಮತೀನ್ ಅವರನ್ನು ಬಿಜೆಪಿ ಸದಸ್ಯರು ಥಳಿಸಿದ ಘಟನೆ ನಡೆದಿದೆ.

ಬಿಜೆಪಿ ಕಾರ್ಪೊರೇಟರ್‌ಗಳು ಮತೀನ್‌ರನ್ನು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲವು ಟಿವಿ ವಾಹಿನಿಗಳೂ ಇದನ್ನು ಪ್ರಸಾರಿಸಿವೆ.

ನಗರ ಪಾಲಿಕೆಯ ಭದ್ರತಾ ಸಿಬ್ಬಂದಿಗಳು ಮತೀನ್ ಅವರನ್ನು ರಕ್ಷಿಸಿ ಹೊರಗೆ ಕರೆದೊಯ್ದಿದ್ದು,ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಗಿತ್ತು.

ಮತೀನ್ ಅವರು ತೊಂದರೆನ್ನುಂಟು ಮಾಡುತ್ತಿದ್ದರು,ಈ ಮೊದಲು ಸದನದಲ್ಲಿ ರಾಷ್ಟ್ರಗೀತೆ ಹಾಡುವುದನ್ನೂ ಅವರು ವಿರೋಧಿಸಿದ್ದರು ಎಂದು ಬಿಜೆಪಿ ಸದಸ್ಯರೋರ್ವರು ಆರೋಪಿಸಿದರು.

ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಕೆಯನ್ನು ತಾನು ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿರೋಧಿಸುತ್ತಿದ್ದೆ,ಆದರೆ ಡಝನ್‌ನಷ್ಟು ಬಿಜೆಪಿ ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮತೀನ್ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News