35ಎ ವಿಧಿ: ಆ.26ರಿಂದ 2 ದಿನಗಳ ಮುಷ್ಕರಕ್ಕೆ ಪ್ರತ್ಯೇಕತಾವಾದಿಗಳ ಕರೆ

Update: 2018-08-17 18:15 GMT

ಶ್ರೀನಗರ,ಆ.17: 35ಎ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಕುರಿತಂತೆ ಆ.26ರಿಂದ ಎರಡು ದಿನಗಳ ಮುಷ್ಕರಕ್ಕೆ ಶುಕ್ರವಾರ ಕರೆ ನೀಡಿರುವ ಕಾಶ್ಮೀರಿ ಪ್ರತ್ಯೇಕತಾವಾದಿಗಳು, ನ್ಯಾಯಾಲಯವು ಯಾವುದೇ ಅಹಿತಕರ ನಿರ್ಧಾರವನ್ನು ಕೈಗೊಂಡರೆ ರಾಜ್ಯಾದ್ಯಂತ ಸಾಮೂಹಿಕ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

35ಎ ವಿಧಿಯು ಜಮ್ಮು-ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಿದೆ ಮತ್ತು ರಾಜ್ಯದ ಹೊರಗಿನ ಜನರು ರಾಜ್ಯದಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸುವುದನ್ನು ನಿಷೇಧಿಸಿದೆ.

ಸರ್ವೋಚ್ಚ ನ್ಯಾಯಾಲಯವು ಆ.27ರಿಂದ ಆರಂಭಗೊಳ್ಳುವ ವಾರದಲ್ಲಿ ಈ ವಿಷಯದಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News