ಸ್ಪಾಟ್ ಫಿಕ್ಸಿಂಗ್: ಪಾಕ್ ಕ್ರಿಕೆಟಿಗ ನಾಸಿರ್‌ಗೆ 10 ವರ್ಷ ನಿಷೇಧ

Update: 2018-08-17 18:33 GMT

  ಲಾಹೋರ್, ಆ.17: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ(ಪಿಎಸ್‌ಎಲ್)ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಪಾಕಿಸ್ತಾನ ದಾಂಡಿಗ ನಾಸಿರ್ ಜೆವ್ಶೆುಡ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)10 ವರ್ಷ ನಿಷೇಧ ಹೇರಿದೆ.

2016-17ರಲ್ಲಿ ನಡೆದ ಪಿಎಸ್‌ಎಲ್‌ನಲ್ಲಿ ನಾಸಿರ್ ಐದು ಬಾರಿ ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ್ದನ್ನು ಸ್ವತಂತ್ರ ಭ್ರಷ್ಟಾಚಾರ ನಿಗ್ರಹ ನ್ಯಾಯಾಧಿಕರಣ ಪತ್ತೆ ಹಚ್ಚಿದೆ.

ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಾಧಿಕರಣ ಶುಕ್ರವಾರ ನಾಸಿರ್‌ರನ್ನು ಅಮಾನತುಗೊಳಿಸಿದ್ದಲ್ಲದೆ ಪಾಕಿಸ್ತಾನದ ಎಲ್ಲ ಶ್ರೇಣಿಯ ಕ್ರಿಕೆಟ್‌ನಲ್ಲಿ ಆಡದಂತೆ ನಿಷೇಧ ಹೇರಿದೆ.

 ನಾಸಿರ್ ಕಳೆದ ಎರಡು ವರ್ಷಗಳಲ್ಲಿ ಎರಡನೇ ಬಾರಿ ನಿಷೇಧಿಸಲ್ಪಟ್ಟಿದ್ದಾರೆ. . 2017ರ ಡಿಸೆಂಬರ್‌ನಲ್ಲಿ ನಾಸಿರ್ ಪಿಎಸ್‌ಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಯಲ್ಲಿ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪಿಸಿಬಿ ಒಂದು ವರ್ಷ ನಿಷೇಧಿಸಿತ್ತು. ಒಂದು ವರ್ಷದ ನಿಷೇಧ ಈ ವರ್ಷದ ಎಪ್ರಿಲ್‌ನಲ್ಲಿ ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News