ಸೇನಾ ತುಕಡಿಯನ್ನು ಮುನ್ನಡೆಸಿದ ಪ್ರಪ್ರಥಮ ಭಾರತೀಯ ಮಹಿಳೆ ಸೋಫಿಯಾ ಖುರೇಷಿ

Update: 2018-08-18 11:21 GMT

ಹೊಸದಿಲ್ಲಿ, ಆ.18: ಸೇನಾ ತುಕಡಿಯೊಂದರ ನೇತೃತ್ವ ವಹಿಸಿದ ಭಾರತದ ಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಶಿ. ಗುಜರಾತ್ ಮೂಲದವರಾದ ಸೋಫಿಯಾ ಬಯೋಕೆಮಿಸ್ಟ್ರಿಯಲ್ಲಿ ಪದವೀಧರೆಯಾಗಿದ್ದು ಪ್ರಸ್ತುತ ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್ ಇದರ ಅಧಿಕಾರಿಯಾಗಿದ್ದಾರೆ.

ಪುಣೆಯಲ್ಲಿ 2016ರ ಮಾರ್ಚ್ 2ರಿಂದ 8ರ ತನಕ ನಡೆದಿದ್ದ ಅತ್ಯಂತ ದೊಡ್ಡ ವಿದೇಶಿ ಮಿಲಿಟರಿ ಕವಾಯತು `ಎಕ್ಸರ್ಸೈಸ್ ಫೋರ್ಸ್ 18'ನಲ್ಲಿ ಭಾಗವಹಿಸಿದ್ದ 18 ಸೇನಾ ತುಕಡಿಗಳಲ್ಲಿ ಖುರೇಷಿ ಪ್ರಥಮ ಮತ್ತು ಏಕೈಕ ಮಹಿಳಾ ಅಧಿಕಾರಿಯಾಗಿದ್ದರು.

ಅದೇ ವರ್ಷ ನಡೆದಿದ್ದ ಏಷ್ಯಾನ್ (ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್)  ಕವಾಯತಿನಲ್ಲಿ ಸೋಫಿಯಾ ಖುರೇಷಿ ಭಾರತೀಯ ಸೇನೆಯ ತರಬೇತಿ ತುಕಡಿಯ ನೇತೃತ್ವ ವಹಿಸಿದ್ದ ಪ್ರಥಮ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಆಕೆ ಗಳಿಸಿದ್ದ ಅನುಭವವೇ ಆಕೆಗೆ ಸೇನಾ ತುಕಡಿಯ ನೇತೃತ್ವ  ವಹಿಸುವ ಗೌರವ ದೊರೆಯಲು ಕಾರಣವಾಗಿತ್ತು.

ಅವರ ಪತಿ ಮೇಜರ್ ತಾಜುದ್ದೀನ್ ಕೂಡ ಭಾರತೀಯ ಸೇನೆಯಲ್ಲಿದ್ದಾರೆ. ಸೋಫಿಯಾ ಅವರ ಪುತ್ರ ಸಮೀರ್ ಗೆ ಆತನ ತಾಯಿಯೇ ಸ್ಫೂರ್ತಿ.  ತನಗೆ ಯುದ್ಧ ವಿಮಾನದ ಪೈಲಟ್ ಆಗಬೇಕು. ದೇಶದ ರಕ್ಷಣೆ ಮಾಡಿ ಹೆಮ್ಮೆಯುಂಟು ಮಾಡಬೇಕು ಎಂದು ಆತ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News