ಕೈಕುಲುಕಲು ನಿರಾಕರಿಸಿದ ಮುಸ್ಲಿಮ್ ದಂಪತಿಗೆ ಸ್ವಿಸ್ ಪೌರತ್ವವಿಲ್ಲ

Update: 2018-08-18 17:29 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಆ. 18: ಇತರರ ಕೈಕುಲುಕಲು ನಿರಾಕರಿಸಿದರು ಎನ್ನುವ ಕಾರಣಕ್ಕಾಗಿ ಸ್ವಿಟ್ಸರ್‌ಲ್ಯಾಂಡ್‌ನ ಪ್ರಜೆಗಳಾಗಲು ಮುಸ್ಲಿಮ್ ದಂಪತಿಯೊಂದು ಸಲ್ಲಿಸಿರುವ ಅರ್ಜಿಯನ್ನು ಲೂಸಾನ್ ನಗರ ತಿರಸ್ಕರಿಸಿದೆ.

ಲಿಂಗ ಸಮಾನತೆಯನ್ನು ಗೌರವಿಸಲು ನಿರಾಕರಿಸಿದ ಕಾರಣಕ್ಕಾಗಿ ದಂಪತಿಯ ಪೌರತ್ವ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಲೂಸಾನ್ ಮುನಿಸಿಪಾಲಿಟಿ ಮೇಯರ್ ಗ್ರೆಗೋಯರ್ ಜುನೋಡ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪೌರತ್ವದ ಮಾನದಂಡಗಳನ್ನು ಪೂರೈಸುತ್ತಾರೆಯೇ ಎನ್ನುವುದನ್ನು ತಿಳಿಯಲು ಮುನಿಸಿಪಾಲಿಟಿ ಸಮಿತಿಯೊಂದು ಕೆಲವು ತಿಂಗಳ ಹಿಂದೆ ದಂಪತಿಯನ್ನು ಪ್ರಶ್ನಿಸಿತ್ತು.

ದಂಪತಿ ಯಾವ ದೇಶದವರು ಎನ್ನುವುದನ್ನು ಅವರು ಬಹಿರಂಗಪಡಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News