ಮೂರನೇ ಟೆಸ್ಟ್: ಇಂಗ್ಲೆಂಡ್ ಗೆಲುವಿಗೆ 521 ರನ್ ಗುರಿ

Update: 2018-08-20 17:00 GMT

ಟ್ರೆಂಟ್‌ಬ್ರಿಡ್ಜ್, ಆ.20: ನಾಯಕ ವಿರಾಟ್ ಕೊಹ್ಲಿ ಶತಕ, ಚೇತೇಶ್ವರ ಪೂಜಾರ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ಕೊಡುಗೆ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ 3ನೇ ಟೆಸ್ಟ್ ಗೆಲುವಿಗೆ 521 ರನ್ ಕಠಿಣ ಗುರಿ ನೀಡಿದೆ.

2 ವಿಕೆಟ್ ನಷ್ಟಕ್ಕೆ 124 ರನ್‌ನಿಂದ 3ನೇ ದಿನದಾಟವನ್ನು ಮುಂದುವರಿಸಿದ ಭಾರತ 110 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಗೆಲುವಿಗೆ ಇನ್ನೆರಡು ದಿನಗಳಲ್ಲಿ 521 ರನ್ ಗಳಿಸುವ ಗುರಿ ನೀಡಿತು.

 ಕೊಹ್ಲಿ 23ನೇ ಶತಕ(103), ಪೂಜಾರ(72) ಹಾಗೂ ಹಾರ್ದಿಕ್ ಪಾಂಡ್ಯ(ಔಟಾಗದೆ 52) ತಂಡದ ಮೊತ್ತ 350ರ ಗಡಿ ದಾಟಲು ನೆರವಾದರು. ಆರಂಭಿಕ ಆಟಗಾರರಾದ ಶಿಖರ ಧವನ್(44)ಹಾಗೂ ರಾಹುಲ್(36)ಮೊದಲ ವಿಕೆಟ್‌ಗೆ 80 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಪೂಜಾರ ಹಾಗೂ ಕೊಹ್ಲಿ 3ನೇ ವಿಕೆಟ್‌ಗೆ 113 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News