ಏಶ್ಯನ್ ಗೇಮ್ಸ್ : ಶೂಟಿಂಗ್ ನಲ್ಲಿ ಸೌರಭ್ ಗೆ ಚಿನ್ನ , ಅಭಿಷೇಕ್ ಗೆ ಕಂಚು

Update: 2018-08-21 05:51 GMT

ಜಕಾರ್ತ, ಆ.21: ಏಶ್ಯನ್ ಗೇಮ್ಸ್ ನಲ್ಲಿ ಮಂಗಳವಾರ  10 ಮೀಟರ್ ಏರ್ ಪಿಸ್ತೂಲ್ ಇವೆಂಟ್ ನಲ್ಲಿ ಭಾರತದ 16ರ ಹರೆಯದ ಶೂಟರ್ ಸೌರಭ್ ಚೌಧರಿ ಚಿನ್ನ ಮತ್ತು ಅಭಿಷೇಕ್  ವರ್ಮಾ ಕಂಚು ಪಡೆದರು.

ಇದರೊಂದಿಗೆ  ಏಶ್ಯನ್ ಗೇಮ್ಸ್ ನ ಮೂರನೇ ಭಾರತ ಅವಳಿ ಪದಕಗಳೊಂದಿಗೆ ಶುಭಾರಂಭ ಮಾಡಿದೆ.

ಸೌರಭ್ ಚೌಧರಿ 240.7 ಪಾಯಿಂಟ್ಸ್ ದಾಖಲಿಸಿ ಚಿನ್ನ ಮತ್ತು 219.3 ಪಾಯಿಂಟ್ಸ್ ಕಲೆ ಹಾಕಿದ ಅಭಿಷೇಕ್ ವರ್ಮಾ  ಕಂಚು ಪಡೆದರು. ಜಪಾನ್ ನ ಟೊವಾಯುಕಿ ಮ್ಯಾಟ್ ಸುಡಾ (239.7) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.

ಏಶ್ಯನ್ ಗೇಮ್ಸ್ ನಲ್ಲಿ  ಭಾರತ ಪಡೆದಿರುವ ಪದಕಗಳ ಸಂಕ್ಯೆ 3ಕ್ಕೆ ಏರಿದೆ. ಈ ಮೊದಲು  ಮಹಿಳೆಯರ 50 ಕೆ.ಜಿ. ಕುಸ್ತಿ ಫ್ರೀಸ್ಟೈಲ್ ನಲ್ಲಿ ವಿನೇಶ್ ಫೋಗಟ್  ಮತ್ತು  ಪುರುಷರ 65 ಕೆ.ಜಿ.ಕುಸ್ತಿಯ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News