ಈತ ಕೈಗಳಲ್ಲಿ ಸೇರಿಸಿಕೊಂಡಿರುವ ಮೈಕ್ರೋಚಿಪ್‌ಗಳು ಇಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುತ್ತವೆ...

Update: 2018-08-21 11:24 GMT

ಕೇವಲ ನಿಮ್ಮ ಕೈಬೆರಳುಗಳನ್ನು ಸ್ಕಾನ್ ಮಾಡಿ ಡಿಜಿಟಲ್ ಬಾಗಿಲನ್ನು ತೆರೆಯಬಹುದಾದರೆ? ಇದು ಅತಿಮಾನುಷ ಶಕ್ತಿ ಎಂಬಂತೆ ಕಾಣುತ್ತದೆ ಅಲ್ಲವೇ? ಇಲ್ಲೊಬ್ಬ ಇಂತಹ ‘ಅತಿಮಾನುಷ ಶಕ್ತಿ’ಯನ್ನು ಹೊಂದಿರುವ ವ್ಯಕ್ತಿಯಿದ್ದಾನೆ.

ಕೆನಡಾದ ರಸ್ ಫಾಕ್ಸ್(36) ತನ್ನನ್ನು ‘ಸೈಬಾರ್ಗ್ ’ ಎಂದು ಕರೆದುಕೊಳ್ಳುತ್ತಾನೆ. ಈತ ತನ್ನ ಕೈಗಳು ಮತ್ತು ಮಣಿಗಂಟುಗಳಲ್ಲಿ ಮೈಕ್ರೋಚಿಪ್‌ಗಳನ್ನು ಕಸಿ ಮಾಡಿಕೊಂಡಿದ್ದಾನೆ. ಈ ಮೈಕ್ರೋಚಿಪ್‌ಗಳು ಆತನ ಮನೆಯ ಬಾಗಿಲುಗಳು,ಬೈಕ್ ಮತ್ತು ಮನೆಯಲ್ಲಿಯ ರಹಸ್ಯ ಡ್ರಾವರ್‌ಗಳ ಚಾವಿಗಳಾಗಿ ಕೆಲಸ ಮಾಡುತ್ತವೆ.

 ಅಂದ ಹಾಗೆ ಫಾಕ್ಸ್ ತನ್ನ ದೇಹದಲ್ಲಿ ನೂರಕ್ಕೂ ಅಧಿಕ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾನೆ. ಅಲ್ಟ್ರಾವಯಲೆಟ್ ಹಚ್ಚೆಗಳಿಂದ ಹಿಡಿದು ಸಿಲಿಕಾನ್ ಕೋಡುಗಳವರೆಗೆ ಇವುಗಳಲ್ಲಿ ಸೇರಿವೆ. ಈ ಕೋಡುಗಳನ್ನು ಈತನ ಹಣೆಯಲ್ಲಿ ಇಂಪ್ಲಾಂಟ್ ಮಾಡಲಾಗಿದೆ.

ಫಾಕ್ಸ್ ಶರೀರ ರೂಪಾಂತರ ಕಲಾವಿದನಾಗಿದ್ದು,ತನ್ನ ಚರ್ಮದ ಕೆಳಗೆ ಅಳವಡಿಸಿಕೊಂಡಿರುವ ಚಿಪ್‌ಗಳ ಹಲವಾರು ಉಪಯೋಗಗಳನ್ನು ಇತ್ತೀಚಿಗೆ ಸಾರ್ವಜನಿಕವಾಗಿ ಪ್ರದರ್ಶಿಸಿದ್ದ. ಈ ಮೈಕ್ರೋಚಿಪ್‌ಗಳು ಕೈಯಿಂದ ತಯಾರಿಸಲಾದ ಮರದ ರಹಸ್ಯ ಮೇಜನ್ನೂ ಸುಲಭವಾಗಿ ತೆರೆಯಬಲ್ಲವು.

ಸದಾಕಾಲ ಚಾವಿಗಳನ್ನು ಹೊತ್ತುಕೊಂಡೇ ತಿರುವಗುವರು ಈ ಚಿಪ್ ಇಂಪ್ಲಾಂಟ್‌ಗಳಿಂದ ಲಾಭ ಪಡೆಯಬಹುದು. ಇವುಗಳ ಗಾತ್ರ ಅಕ್ಕಿಕಾಳಿನಷ್ಟು ಇರುವುದರಿಂದ ಅಳವಡಿಸಿಕೊಳ್ಳುವಾಗ ಮತ್ತು ನಂತರ ಯಾವುದೇ ನೋವಾಗುವುದಿಲ್ಲ. ಅಲ್ಲದೆ ಈ ಚಿಪ್‌ಗಳು ನಿಯೋಜಿತ ರೀಡರ್ ಸಮೀಪವಿದ್ದಾಗ ಸೃಷ್ಟಿಯಾಗುವ ವಿದ್ಯುತ್‌ಕಾಂತೀಯ ಶಕ್ತಿಯಿಂದ ಕಾರ್ಯ ನಿರ್ವಹಿಸುವುದರಿಂದ ಇವುಗಳಿಗೆ ಬ್ಯಾಟರಿ ಅಥವಾ ಚಾರ್ಜಿಂಗ್‌ನ ಅಗತ್ಯವೂ ಎಲ್ಲ ಎನ್ನುತ್ತಾನೆ ಫಾಕ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News