ಅತ್ಯಾಚಾರಕ್ಕೆ ವಿರೋಧ: ದಲಿತ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕಮಿಗಳು
Update: 2018-08-21 22:27 IST
ಪಾಟ್ನ, ಆ. 21: ಅತ್ಯಾಚಾರ ವಿರೋಧಿಸಿದ ದಲಿತ ಮಹಿಳೆಯ ಮೇಲೆ ದುಷ್ಕರ್ಮಿಗಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹೃದಯ ವಿದ್ರಾವಕ ಘಟನೆ ಇಲ್ಲಿನ ಪುರಾಂಬಿಘಾ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಮಹಿಳೆ ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ‘‘ಅವರಿಗೆ ಶೇ. 80ರಿಂದ 90ರಷ್ಟು ಸುಟ್ಟ ಗಾಯಗಳಾಗಿವೆ. ನಮ್ಮ ವೈದ್ಯರು ಅವರನ್ನು ಬದುಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಂತಹ ಪ್ರಕರಣಗಳಲ್ಲಿ ಬದುಕುವ ಅವಕಾಶ ತೀರಾ ಕಡಿಮೆ. ಅವರು ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ’’ ಎಂದು ಪಿಎಂಎಚ್‌ಸಿ ಅಧೀಕ್ಷಕ ರಾಜೀವ್ ರಂಜನ್ ಪ್ರಸಾದ್ ಹೇಳಿದ್ದಾರೆ. ಇದುವರೆಗೆ ಪ್ರಥಮ ಮಾಹಿತಿ ವರದಿ ದಾಖಲಾಗಿಲ್ಲ.