ಕಾಶ್ಮೀರ:ಅಪಹೃತ ಬಿಜೆಪಿ ನಾಯಕ ಶವವಾಗಿ ಪತ್ತೆ

Update: 2018-08-22 07:59 GMT

ಶ್ರೀನಗರ, ಆ.22: ಅಪರಿಚಿತ ಬಂದೂಕುಧಾರಿಯಿಂದ ಮಂಗಳವಾರ ಸಂಜೆ ಅಪಹರಿಸಲ್ಪಟ್ಟ ಬಿಜೆಪಿ ನಾಯಕ ಶಬ್ಬೀರ್ ಅಹ್ಮದ್ ಬಟ್ ಬುಧವಾರ ಬೆಳಗ್ಗೆ ಕಾಶ್ಮೀರದ ಪುಲ್ವಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

26ರ ಹರೆಯದ ಬಟ್‌ರನ್ನು ಶ್ರೀನಗರದ ಪುಲ್ವಾಮದಲ್ಲಿರುವ ತನ್ನ ಮನೆಗೆ ವಾಪಸಾಗುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಅಪಹರಿಸಿದ್ದ. ಬಟ್ ಶ್ರೀನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈದ್ ಆಚರಣೆ ನಡೆಸಲು ಮಂಗಳವಾರ ಸಂಜೆ ತನ್ನ ಮನೆಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಬಟ್‌ರನ್ನು ಅಪರಿಸಲಾಗಿತ್ತು.

ಲಿಟ್ಟರ್ ಗ್ರಾಮದಲ್ಲಿ ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಕೊಲೆಗೆ ಕಾರಣ ಏನೆಂಬುದರ ಬಗ್ಗೆ ನಾವು ತನಿಖೆ ನಡೆಸಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಟ್ ಕಳೆದ ಒಂದು ವರ್ಷದಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಅಪರಿಚಿತ ಗನ್‌ಮ್ಯಾನ್‌ನಿಂದ ಕೊಲ್ಲಲ್ಪಟ್ಟ ಬಿಜೆಪಿಯ ಮೂರನೇ ಹಿರಿಯ ನಾಯಕನಾಗಿದ್ದಾರೆ. ಹತ್ಯೆಯ ಹೊಣೆಯನ್ನು ಯಾವ ಉಗ್ರಗಾಮಿ ಸಂಘಟನೆವಹಿಸಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News