ನ್ಯೂಝಿಲೆಂಡ್ ಆಲ್‌ರೌಂಡರ್ ಎಲಿಯಟ್ ಕ್ರಿಕೆಟ್‌ನಿಂದ ನಿವೃತ್ತಿ

Update: 2018-08-22 13:26 GMT

ವೆಲ್ಲಿಂಗ್ಟನ್, ಆ.22: ದಕ್ಷಿಣ ಆಫ್ರಿಕ ಸಂಜಾತ ನ್ಯೂಝಿಲೆಂಡ್ ಆಲ್‌ರೌಂಡರ್ ಗ್ರಾಂಟ್ ಎಲಿಯಟ್ ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

39ರ ಹರೆಯದ ಎಲಿಯಟ್ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಲಿಯಟ್ ಮಧ್ಯಮ ವೇಗದ ಬೌಲರ್ ಆಗಿದ್ದರು.

ದಕ್ಷಿಣ ಆಫ್ರಿಕದ ಗೌಟೆಂಗ್ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಎಲಿಯಟ್ 2001ರಲ್ಲಿ ನ್ಯೂಝಿಲೆಂಡ್‌ಗೆ ವಲಸೆ ಬಂದಿದ್ದರು. ಕಿವೀಸ್ ಪರ 5 ಟೆಸ್ಟ್, 83 ಏಕದಿನ ಹಾಗೂ 17 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2015ರ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನಿ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ನ್ಯೂಝಿಲೆಂಡ್‌ಗೆ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯ ಎಲಿಯಟ್‌ಗೆ ಹೆಚ್ಚು ಹೆಸರು ತಂದು ಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News