ಏಶ್ಯನ್ ಗೇಮ್ಸ್: ವುಶು ಸ್ಪರ್ಧೆಯಲ್ಲಿ ಭಾರತಕ್ಕೆ 4 ಕಂಚು

Update: 2018-08-22 14:10 GMT

ಜಕಾರ್ತ, ಆ.22: ಏಶ್ಯನ್ ಗೇಮ್ಸ್‌ನ ವುಶು ಸ್ಪರ್ಧೆಯಲ್ಲಿ ಭಾರತದ ಮೂವರು ಪುರುಷ ಸ್ಪರ್ಧಿಗಳು ಹಾಗೂ ಓರ್ವ ಮಹಿಳಾ ಸ್ಪರ್ಧಿ ಸೆಮಿಫೈನಲ್‌ಗೆ ತಲುಪಿದ್ದರೂ ಗೆಲುವು ಸಾಧಿಸಲು ವಿಫಲರಾಗಿದ್ದಾರೆ. ಸೆಮಿ ಫೈನಲ್‌ನಲ್ಲಿ ಸೋತರೂ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಮಹಿಳೆಯರ ಸ್ಯಾಂಡಾ 60 ಕೆಜಿ ತೂಕ ವಿಭಾಗದಲ್ಲಿ ರೋಶಿಬಾ ದೇವಿ ಚೀನಾದ ಕಾಯ್ ಯಿಂಗ್‌ಯಿಂಗ್ ವಿರುದ್ಧ ಸೋತಿದ್ದಾರೆ.

ಪುರುಷರ ಸ್ಯಾಂಡಾ 60 ಕೆಜಿ ಸೆಮಿ ಫೈನಲ್‌ನಲ್ಲಿ ಭಾರತದ ಸೂರ್ಯ ಭಾನು ಪ್ರತಾಪ್ ಸಿಂಗ್ ಇರಾನ್‌ನ ಇರ್ಫಾನ್ ವಿರುದ್ಧ ಸೋತಿದ್ದಾರೆ.

ಸಂತೋಷ್ ಕುಮಾರ್ ಪುರುಷರ ಸ್ಯಾಂಡಾ 56 ಕೆಜಿ ವಿಭಾಗದ ಸೆಮಿ ಫೈನಲ್‌ನಲ್ಲಿ ವಿಯೆಟ್ನಾಂನ ಟ್ರುಯೊಂಗ್ ಗಿಯಾಂಗ್‌ಗೆ ಶರಣಾಗಿದ್ದಾರೆ. ಪುರುಷರ ಸ್ಯಾಂಡಾ 65 ಕೆಜಿ ಸೆಮಿ ಫೈನಲ್‌ನಲ್ಲಿ ಭಾರತದ ನರೇಂದರ್ ಗ್ರೆವಾಲ್ ಇರಾನ್‌ನ ಫೋರೌಡ್ ಝಫಾರಿ ವಿರುದ್ಧ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News