ನನ್ನ ವಿರುದ್ಧ ವಾಗ್ದಂಡನೆ ವಿಧಿಸಿದರೆ ಅಮೆರಿಕದ ಆರ್ಥಿಕತೆ ಕುಸಿತ: ಟ್ರಂಪ್ ಎಚ್ಚರಿಕೆ

Update: 2018-08-23 17:49 GMT

ವಾಶಿಂಗ್ಟನ್, ಆ. 23: ತನ್ನ ವಿರುದ್ಧ ವಾಗ್ದಂಡನೆ ವಿಧಿಸಿದರೆ ಅಮೆರಿಕದ ಆರ್ಥಿಕತೆಯು ಕುಸಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

‘‘ನಾನು ಯಾವತ್ತಾದರೂ ವಾಗ್ದಂಡನೆಗೆ ಒಳಗಾದರೆ, ಮಾರುಕಟ್ಟೆಗಳು ಕುಸಿಯುತ್ತದೆ. ಪ್ರತಿಯೊಬ್ಬರೂ ತುಂಬಾ ಬಡವರಾಗುತ್ತಾರೆ ಎಂದು ನನಗನಿಸುತ್ತದೆ’’ ಎಂದು ‘ಫಾಕ್ಸ್ ಆ್ಯಂಡ್ ಫ್ರೆಂಡ್ಸ್’ ಕಾರ್ಯಕ್ರಮದಲ್ಲಿ ಗುರುವಾರ ಪ್ರಕಟವಾದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಟ್ರಂಪ್‌ರ ಮಾಜಿ ವಕೀಲ ಮೈಕಲ್ ಕೋಹನ್ ಟ್ರಂಪ್ ವಿರುದ್ಧ ನೀಡಿದ ಹೇಳಿಕೆಯ ಬಳಿಕ, ಅವರಿಗೆ ಉಂಟಾಗಿರುವ ಕಾನೂನು ಹಿನ್ನಡೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಆರ್ಥಿಕ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಅಪರಾಧ ಮಾಡುವಂತೆ ಟ್ರಂಪ್ ತನಗೆ ಸೂಚನೆ ನೀಡಿದ್ದರು ಎಂಬುದಾಗಿ ಕೋಹನ್ ಪ್ರಮಾಣ ಮೂಲಕ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News