ಗಾಝಾ ಹತ್ಯೆ ತನಿಖಾ ಸಮಿತಿಯ ಮುಖ್ಯಸ್ಥ ರಾಜೀನಾಮೆ

Update: 2018-08-23 18:02 GMT

ಜಿನೇವ, ಆ. 23: ಈ ವರ್ಷ ಗಾಝಾದಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ನಡೆಸುತ್ತಿರುವ ತನಿಖೆಯ ನೇತೃತ್ವ ವಹಿಸಿದ್ದ ಅಮೆರಿಕದ ಮಾಜಿ ಯುದ್ಧಾಪರಾಧಗಳ ವಕೀಲ ಡೇವಿಡ್ ಕ್ರೇನ್ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಅವರನ್ನು ಕಳೆದ ತಿಂಗಳಷ್ಟೇ ಈ ಹುದ್ದೆಗೆ ನೇಮಿಸಲಾಗಿತ್ತು.

ಅವರು 2002-2005ರ ಅವಧಿಯಲ್ಲಿ ಸಿಯರಾ ಲಿಯೋನ್‌ಗಾಗಿನ ವಿಶೇಷ ನ್ಯಾಯಾಲಯದಲ್ಲಿ ಮುಖ್ಯ ಪ್ರಾಸಿಕ್ಯೂಟರ್ ಆಗಿದ್ದರು.

ಮಾರ್ಚ್ ಕೊನೆಯಿಂದ ಫೆಲೆಸ್ತೀನಿಯರು ಇಸ್ರೇಲ್ ಗಡಿಯಲ್ಲಿ ಪ್ರತಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ ಕನಿಷ್ಠ 170 ಫೆಲೆಸ್ತೀನಿಯರು ಹತರಾಗಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲು ಮೇ ತಿಂಗಳಲ್ಲಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News