ಗಂಟೆಗಳಲ್ಲೇ ನಿರ್ಮಾಣಗೊಳ್ಳಲಿದೆ ಚೆಂದದ ಮನೆ!

Update: 2018-08-23 18:48 GMT

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟಿಯುಡಿಎ)ವು ಯೋಜನೆಗೆ ಅಂಗೀಕಾರ ನೀಡಿದ್ದು, ಮನೆಗಳು ನೆಲಮಹಡಿ ಮತ್ತು ಮೂರು ಮಹಡಿಗಳ ಕಟ್ಟಡಗಳಲ್ಲಿ ಇರುತ್ತವೆ. ವಾಹನಗಳ ಪಾರ್ಕಿಂಗ್ ಏರಿಯಾ, ಮಕ್ಕಳ ಆಟದ ಸ್ಥಳ ಮತ್ತು ಪ್ರತಿ ಎರಡು ಬ್ಲಾಕ್‌ಗಳಿಗೆ ಕಾಮನ್ ಲಿಫ್ಟ್‌ಗಳಿರುತ್ತವೆ. ಆಗಸ್ಟ್ 3ರಂದು ಗೃಹನಿರ್ಮಾಣ ಕಂಪೆನಿಯು ಪತ್ರಕರ್ತರ ಸಮ್ಮುಖದಲ್ಲಿ ಗೃಹ ನಿವೇಶನದಲ್ಲಿ ಒಂದು ಗಂಟೆಯೊಳಗಾಗಿ ಫ್ಲಾಟ್ ನಿರ್ಮಾಣದ ಒಂದು ನೇರ ಪ್ರದರ್ಶನ (ಡೆಮೊ) ನೀಡಿದೆ.

ತುಮಕೂರು ನಗರದ ಹೊರವಲಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಪೂರ್ವ ನಿರ್ಮಿತ ತಂತ್ರಜ್ಞಾನದ ಅನ್ವಯ ಕೈಗೆಟಕುವ ಬೆಲೆಗೆ ಮೊತ್ತಮೊದಲ ಮನೆಗಳ ಕಾಲನಿ ಸಿದ್ಧಗೊಳ್ಳುತ್ತಿದೆ. 268 ಮನೆಗಳಿರುವ ‘‘ಸ್ವರ್ಣಗೃಹ’’ ಎಂದು ನಾಮಕರಣ ಮಾಡಲಾಗಿರುವ ಕಾಲನಿಯಲ್ಲಿ, ಅಣ್ಣೇನಹಳ್ಳಿಯಲ್ಲಿ ‘1 ಬಿಎಚ್‌ಕೆ’ ನಿವಾಸ, ದಿನಕ್ಕೆರಡರಂತೆ ನಿರ್ಮಾಣಗೊಳ್ಳುತ್ತದೆ. 1.5ಎಕರೆ ನಿವೇಶನದಲ್ಲಿ ಈಗಾಗಲೇ 10 ಯುನಿಟ್‌ಗಳು ತಲೆಯೆತ್ತಿ ನಿಂತಿವೆ. ಮುಂದಿನ ನಾಲ್ಕು ತಿಂಗಳುಗಳೊಳಗಾಗಿ ಇಡೀ ಕಾಲನಿ ಸಿದ್ಧಗೊಳ್ಳಲಿದೆ. ಫೆಲಿಸಿಟಿ ಅಡೋಬ್ ಎಂಬ ಕಂಪೆನಿ ಕೈಗೆತ್ತಿಕೊಂಡಿರುವ ಈ ಯೋಜನೆಯಲ್ಲಿ ತಂತ್ರಜ್ಞಾನ ಮತ್ತು ಹಣಕಾಸು-ಎರಡು ವಿಷಯಗಳಲ್ಲೂ ನೂತನ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

ಫಲಾನುಭವಿಗಳಿಗೆ ನಿರ್ಮಿಸಲಾಗುತ್ತಿರುವ ಈ ಯೋಜನೆಯಲ್ಲಿ ಹಣಕಾಸು ಪೂರೈಕೆಯ ನಿಟ್ಟಿನಲ್ಲಿ ಕೂಡ ನಾವೀನ್ಯತೆಯನ್ನು ಸಾಧಿಸಲಾಗಿದೆ.

ಅನುಕೂಲದ ಜತೆ ಆಕರ್ಷಕ ನೋಟ
325 ಚದರ ಅಡಿ ವಿಸ್ತೀರ್ಣದ ಪ್ರತಿಯೊಂದು ಮನೆಗೆ ಸುಮಾರು ರೂ.9.95ಲಕ್ಷ ತಗಲುತ್ತದೆ. ಮೊದಲ ಹಂತದ ಪಾವತಿ ಕೇವಲ ಒಂದು ಲಕ್ಷ ರೂಪಾಯಿ. ಪಿಎಂಎವೈ 2.37 ಲಕ್ಷ ರೂ. ಸಬ್ಸಿಡಿ ನೀಡುತ್ತದೆ. ಉಳಿದ ಮೊತ್ತವನ್ನು ಸಾಲವಾಗಿ ಬ್ಯಾಂಕ್‌ಗಳು ನೀಡುತ್ತವೆ. ತಿಂಗಳೊಂದರ 2,500ರಿಂದ 6,000 ರೂಪಾಯಿವರೆಗಿನ ಮಾಸಿಕ ಕಂತುಗಳಲ್ಲಿ ಬ್ಯಾಂಕ್ ಸಾಲವನ್ನು 15ರಿಂದ 20 ವರ್ಷಗಳ ಅವಧಿಯಲ್ಲಿ ತೀರಿಸಬೇಕಾಗುತ್ತದೆ. ಪ್ರತಿ ಮನೆಗೆ ಕಾಂಪೌಂಡ್ ಗೋಡೆ, ನೀರು, ವಿದ್ಯುತ್, ತ್ಯಾಜ್ಯನೀರು ವಿಲೆವಾರಿಗೆ ಎಸ್‌ಟಿಪಿ ಮತ್ತು ಸುತ್ತಮುತ್ತಣ ಪ್ರದೇಶದಲ್ಲಿ ಹಸಿರು ಪರಿಸರ - ಎಲ್ಲವೂ ಕಾಲನಿಯ ನಿರ್ಮಾಣದಲ್ಲಿ ಅಡಕವಾಗಿದೆ. ಆಧುನಿಕ ಸ್ಯಾನಿಟರಿ ಸಾಮಗ್ರಿಗಳು ಹಾಗೂ ವಿಟ್ರಿಫೈಡ್ ಟೈಲ್‌ಗಳನ್ನು ಹೊದಿಸಿದ ನೆಲ-ಇವುಗಳೆಲ್ಲ ಮನೆಗಳಿಗೆ ಪಾಶ್ ನೋಟವನ್ನು ನೀಡುತ್ತವೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟಿಯುಡಿಎ)ವು ಯೋಜನೆಗೆ ಅಂಗೀಕಾರ ನೀಡಿದ್ದು, ಮನೆಗಳು ನೆಲಮಹಡಿ ಮತ್ತು ಮೂರು ಮಹಡಿಗಳ ಕಟ್ಟಡಗಳಲ್ಲಿ ಇರುತ್ತವೆ. ವಾಹನಗಳ ಪಾರ್ಕಿಂಗ್ ಏರಿಯಾ, ಮಕ್ಕಳ ಆಟದ ಸ್ಥಳ ಮತ್ತು ಪ್ರತಿ ಎರಡು ಬ್ಲಾಕ್‌ಗಳಿಗೆ ಕಾಮನ್ ಲಿಫ್ಟ್‌ಗಳಿರುತ್ತವೆ.
ಆಗಸ್ಟ್ 3ರಂದು ಗೃಹನಿರ್ಮಾಣ ಕಂಪೆನಿಯು ಪತ್ರಕರ್ತರ ಸಮ್ಮುಖದಲ್ಲಿ ಗೃಹ ನಿವೇಶನದಲ್ಲಿ ಒಂದು ಗಂಟೆಯೊಳಗಾಗಿ ಫ್ಲಾಟ್ ನಿರ್ಮಾಣದ ಒಂದು ನೇರ ಪ್ರದರ್ಶನ (ಡೆಮೊ) ನೀಡಿದೆ.

ಬಾಳ್ವಿಕೆಗೆ ಪ್ರಮಾಣೀಕರಿಸಲಾಗಿದೆ
ಫೆಸಿಲಿಟಿ ಅಡೋಟ್ ಕಂಪೆನಿಯ ಸ್ಥಾಪಕ ಹಾಗೂ ಸಿಇಒ ಪ್ರೀನಂದ್ ಪ್ರೇಮಚಂದ್ರನ್‌ರವರ ಪ್ರಕಾರ, ಸಾಂಪ್ರದಾಯಿಕ ಗೃಹ ನಿರ್ಮಾಣಕ್ಕೆ ಹೋಲಿಸಿದಾಗ ಪೂರ್ವ ನಿರ್ಮಿತ (ಪ್ರೀಫ್ಯಾಬ್) ತಂತ್ರಜ್ಞಾನವು ನಿರ್ಮಾಣದ ಅವಧಿಯನ್ನು ಶೇ. 50ರಷ್ಟು ಕಡಿಮೆ ಮಾಡುತ್ತದೆ. ಇದರಿಂದಾಗಿ ಗೃಹ ಸಾಲ ಪಡೆದವರು ಪಾವತಿಸಬೇಕಾದ ಬಡ್ಡಿಯ ಮೊತ್ತ ಕಡಿಮೆಯಾಗುತ್ತದೆ. ಅವರು ಹೇಳುವಂತೆ, ತುಮಕೂರಿನ ಶ್ರೀ ಸಿದ್ದಗಂಗಾ ತಾಂತ್ರಿಕ ವಿದ್ಯಾನಿಲಯದ (ಎಸ್‌ಎಸ್‌ಐಟಿ) ಸಿವಿಲ್ ಇಂಜಿನಿಯರಿಂಗ್ ವಿಭಾಗವು, ‘ರೀಬೌಂಡ್ ಹ್ಯಾಮರ್’ ವಿಧಾನದನ್ವಯ ನಡೆಸಲಾದ ಪರೀಕ್ಷೆಗಳನ್ನಾಧರಿಸಿ ಮನೆಗಳ ದೃಢತೆ ಹಾಗೂ ಬಾಳ್ವಿಕೆಯ ಅವಧಿಯನ್ನು ಪ್ರಮಾಣೀಕರಿಸಿದೆ.

ಕಡಿಮೆ ಬೆಲೆ, ಕಡಿಮೆ ಗುಣಮಟ್ಟವಲ್ಲ
ಯೋಜನೆಯ ತಂತ್ರಜ್ಞಾನ ಸಲಹೆಗಾರ ಹಾಗೂ ಸೈಕಾನ್ ಇನ್‌ಫ್ರಾದ ನಿರ್ದೇಶಕ ಸುನೀಲ್‌ಕುಮಾರ್, ‘‘ಗ್ರಾಹಕರ ಕೈಗೆಟಕುವ ಬೆಲೆಗೆ ದೊರಕುವಂತೆ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆಯೇ ಹೊರತು, ಅವುಗಳ ಬಾಳ್ವಿಕೆಯೊಂದಿಗೆ ರಾಜಿಮಾಡಿಕೊಂಡಿಲ್ಲ. ದೀರ್ಘಕಾಲದ ಬಾಳ್ವಿಕೆ ಬರುವಂತೆ ಮನೆಗಳನ್ನು ವಿನ್ಯಾಸಗೊಳಿಸಲಾಗಿದೆ’’ ಎನ್ನುತ್ತಾರೆ. ‘‘ಪ್ರೀಫ್ಯಾಬ್ ಚಾಕಟ್ಟುಗಳು ಸಾಂಪ್ರದಾಯಿಕ ಚೌಕಟ್ಟುಗಳಷ್ಟೇ ಬಲಿಷ್ಠವೆಂದು ಸಾಬೀತಾಗಿದೆ. ಈ ವಿನ್ಯಾಸದಲ್ಲಿ ಹನ್ನೆರಡು ಮಹಡಿಗಳತನಕವೂ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ. ‘ಕಡಿಮೆ ಬೆಲೆ ಎಂದರೆ ಕಳಪೆ ಮಟ್ಟವಲ್ಲ’ ಎಂಬುದೇ ಯೋಜನೆಯ ಧ್ಯೇಯವಾಕ್ಯ. ಸ್ಲಾಬ್‌ಗಳನ್ನು ಕೂರಿಸಲು ಹೆವಿ ಅರ್ತ್-ಮೂವಿಂಗ್ ಯಂತ್ರಗಳನ್ನು ಹಾಗೂ ಲಿಪ್ಟ್‌ಗಳನ್ನು ಬಳಸಬೇಕಾಗುವುದರಿಂದ, ಬೃಹತ್ ಪ್ರಮಾಣದಲ್ಲಿ ಗ್ರೂಪ್ ಹೌಸಿಂಗ್ ಯೋಜನೆಯನ್ನು ಕೈಗೊಂಡಲ್ಲಿ ಮಾತ್ರ ಪ್ರೀ ಫ್ಯಾಬ್ ಚಾಕಟ್ಟುಗಳ ನಿರ್ಮಾಣ ಕೈಗೆಟುಕುವ ಬೆಲೆಯಲ್ಲಿ ದೊರಕುವುದು ಸಾಧ್ಯವಾಗುತ್ತದೆ.’’ ಎನ್ನುತ್ತಾರೆ ಸುನೀಲ್ ಕುಮಾರ್.
ಸುಲಭ ಕಂತುಗಳು:
ತುಮಕೂರು ನಗರದ ಹೊರವಲಯದ ಅಂತರ್ಸನ ಹಳ್ಳಿಯಲ್ಲಿರುವ ಆಟೋ ಬಿಡಿಭಾಗಗಳ ಉತ್ಪಾದಕ ಕಂಪೆನಿ ಫಿಟ್‌ವೆಲ್‌ನಲ್ಲಿ ಉದ್ಯೋಗಿಯಾಗಿರುವ ಜೆ.ಶ್ರೀನಿವಾಸ್ ಮನೆಗಳ ಕಾಲನಿಯಲ್ಲಿ ಒಂದು ಮನೆಯನ್ನು ಕೊಂಡುಕೊಂಡಿದ್ದಾರೆ. ಅವರ ಸಾಲದ ಮಾಸಿಕ ಕಂತುಗಳನ್ನು ಅವರ ಭವಿಷ್ಯ ನಿಧಿಯೊಂದಿಗೆ ಜೋಡಿಸಲಾಗಿದೆ. ಮುಂದಿನ 20 ವರ್ಷಗಳಲ್ಲಿ (240 ಕಂತುಗಳಲ್ಲಿ) ಅವರು ಸಾಲ ಮರುಪಾವತಿ ಮಾಡಬೇಕಾಗುತ್ತಾದರೂ ಅವರು ಆ ಅವಧಿಗಿಂತ ಮೊದಲೇ ಸಾಲವನ್ನು ತೀರಿಸುವ ಸಾಧ್ಯತೆ ಇದೆ.
 ಕಾಲನಿಯ ಪ್ರದೇಶದಲ್ಲಿರುವ 1,480 ನಿವಾಸಿಗಳ ಸಮೀಕ್ಷೆ ನಡೆಸಿ, ಸ್ವಂತ ಮನೆ ಹೊಂದುವ ಆಕಾಂಕ್ಷೆ ಉಳ್ಳವರನ್ನು ಗುರುತಿಸಿದ ಬಳಿಕ ಆ ಸ್ಥಳವನ್ನು ಕಾಲನಿಯ ನಿರ್ಮಾಣಕ್ಕೆ ಆಯ್ಕೆ ಮಾಡಲಾಯಿತು. ಹೆಚ್ಚಿನ ನಿವಾಸಿಗಳು ಉದ್ದಿಮೆಗಳ ರಂಗದಲ್ಲಿ ದುಡಿಯುವವರಾಗಿದ್ದು ಕೆಳ ಆದಾಯ-ಗುಂಪು ಮತ್ತು ಕೆಳ-ಮಧ್ಯ ಆದಾಯ ಗುಂಪಿಗೆ ಸೇರಿದವರೆಂದು ಸಮೀಕ್ಷೆಯಿಂದ ತಿಳಿದು ಬಂತು.
ಪಿಎಂಎವೈ ಯೋಜನೆಯ ಫಲಾನುಭವಿಗಳಾಗಲು ಈ ಒಂದು ವರ್ಗಕ್ಕೆ ಸೇರಿದರೂ ಅರ್ಹರಾಗಿದ್ದಾರೆ. ಯೋಜನೆಗೆ ಐಸಿಐಸಿಐ ಬ್ಯಾಂಕ್ ಹಣಕಾಸು ಪೂರೈಸುತ್ತಿದೆ. ‘‘ಮನೆಗಳನ್ನು ಕೊಂಡುಕೊಳ್ಳುವವರ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಮತ್ತು ಸ್ವರ್ಣ ಗೃಹ ತಂಡದ ಸಾಮಾಜಿಕ ಬದ್ಧತೆ, ಕಾರ್ಯವೈಖರಿ ಹಾಗೂ ಯೋಜನೆಯನ್ನು ಪರಿಗಣಿಸಿ ಬ್ಯಾಂಕ್ ಹಣಕಾಸು ಪೂರೈಸಲು ನಿರ್ಧರಿಸಿತು’’ ಎಂದಿದ್ದಾರೆ ಬ್ಯಾಂಕ್‌ನ ಮಾರಾಟ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ದೀಪಕ್ ಶೆಟ್ಟಿ.
‘‘ವಸಂತ ನರಸಪುರ ಇಂಡಸ್ಟ್ರಿಯಲ್ ಏರಿಯಾದ ನೌಕರರಿಗಾಗಿ ಇಂತಹದೇ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲು ತಮ್ಮ ಇಂಡಸ್ಟ್ರೀಸ್ ಅಸೋಸಿಯೇಶನ್ ಯೋಚಿಸುತ್ತಿದೆ’’ ಎಂದಿದ್ದಾರೆ ಅಸೋಸಿಯೇಶನ್‌ನ ಅಧ್ಯಕ್ಷ ಶ್ರೀ ಕೆ.ಎನ್.ಶಿವಕುಮಾರ್.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ