ಅಮೆಝಾನ್ ಕಾಡಿನಲ್ಲಿ ಬುಡಕಟ್ಟು ಪಂಗಡ ಪತ್ತೆ

Update: 2018-08-24 17:42 GMT

ಬ್ರಸೀಲಿಯ (ಬ್ರೆಝಿಲ್), ಆ. 24: ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಇಲ್ಲ ಎಂದು ಭಾವಿಸಲಾದ ಬುಡಕಟ್ಟು ಪಂಗಡವೊಂದನ್ನು ಬ್ರೆಝಿಲ್‌ನ ದಟ್ಟ ಅಮೆಝಾನ್ ಅರಣ್ಯದಲ್ಲಿ ಪತ್ತೆಹಚ್ಚಲಾಗಿದೆ.

ಈ ಚಿತ್ರಗಳನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಗಿದೆ.

ಪೆರು ದೇಶದ ಗಡಿ ಸಮೀಪದ ಜಾವರಿ ನದಿ ಕಣಿವೆಯ ದಟ್ಟ ಅರಣ್ಯದ ಒಳಗಿನ ಮೈದಾನ ಪ್ರದೇಶದಲ್ಲಿ ಹಲವಾರು ಜನರು ನಡೆಯುತ್ತಿರುವುದನ್ನು ಈ ವಾರ ಬಿಡುಗಡೆ ಮಾಡಲಾದ ವೀಡಿಯೊ ತೋರಿಸಿದೆ ಎಂದು ಬ್ರೆಝಿಲ್‌ನ ನ್ಯಾಶನಲ್ ಇಂಡಿಯನ್ ಫೌಂಡೇಶನ್ ಗುರುವಾರ ಹೇಳಿದೆ.

ಓರ್ವ ವ್ಯಕ್ತಿ ಭರ್ಚಿ ಅಥವಾ ಒಂದು ವಿಧದ ಕೋಲನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ. ಇತರ 4-5 ಮಂದಿ ಗುಡಿಸಲಿನಂತೆ ಕಾಣುವ ನಿರ್ಮಾಣಗಳ ಸಮೀಪ ನಿಂತಿರುವುದು ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News