‘ಅಲ್ ಜಝೀರಾ’ಗೆ ನೀಡಿದ್ದ ಭದ್ರತಾ ಅನುಮತಿ ಹಿಂಪಡೆದ ಗೃಹ ಸಚಿವಾಲಯ

Update: 2018-08-25 10:33 GMT

ಹೊಸದಿಲ್ಲಿ, ಆ.25: ಭದ್ರತಾ ಅನುಮತಿಯನ್ನು ಗೃಹ ಸಚಿವಾಲಯವು ಹಿಂದೆಗೆದ ನಂತರ ಅಂತಾರಾಷ್ಟ್ರೀಯ ನ್ಯೂಸ್ ಚಾನೆಲ್ ಆದ ‘ಅಲ್ ಜಝೀರಾ’ ಭಾರತದಲ್ಲಿ ಪ್ರಸಾರವನ್ನು ನಿಲ್ಲಿಸಲಿದೆ.

ಭದ್ರತಾ ಅನುಮತಿ ಹಿಂದೆಗೆತದ ವಿರುದ್ಧ ಕತರ್ ಮೂಲದ ಈ ಚಾನಲ್ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಬಗೆಗಿನ ಅಂತಿಮ ನಿರ್ಧಾರ ಶೀಘ್ರ ಪ್ರಕಟವಾಗಲಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಲ್ ಜಝೀರಾದ ವಿರುದ್ಧ ಈ ಕ್ರಮ ಕೈಗೊಂಡಿರುವುದಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲವಾದರೂ ಜಮ್ಮು ಮತ್ತು ಕಾಶ್ಮೀರದ ಬಗೆಗಿನ ಸಾಕ್ಷ್ಯ ಚಿತ್ರವೊಂದರ ಪ್ರಸಾರ ಮಾಡಿದ್ದು ಕೇಂದ್ರದ ಕೋಪಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

ಈ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರನ್ನು ಸಂಪರ್ಕಿಸಲಾಗಿದ್ದು, “ಯಾವುದೇ ಮಾಧ್ಯಮಕ್ಕೆ ಪ್ರಸಾರದ ಲೈಸೆನ್ಸ್ ನೀಡುವುದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕೆಲಸ” ಎಂದವರು ಹೇಳಿದ್ದಾರೆ ಎಂದು newindianexpress.com ವರದಿ ಮಾಡಿದೆ.

2010 ಡಿಸೆಂಬರ್ 3ರಂದು ಭದ್ರತಾ ಅನುಮತಿ ನೀಡಲಾಗಿದ್ದು, 2018 ಮೇ 29ಕ್ಕೆ ಹಿಂಪಡೆಯಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News