ಹೊಟೇಲ್‌ನಲ್ಲಿ ಬೆಂಕಿ ಅವಘಡ: 18 ಮಂದಿ ಬಲಿ

Update: 2018-08-25 17:19 GMT

ಬೀಜಿಂಗ್, ಆ.25: ಹೊಟೇಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಹದಿನೆಂಟು ಮಂದಿ ಮೃತಪಟ್ಟು 19 ಮಂದಿ ಗಾಯಗೊಂಡ ಘಟನೆ ಚೀನಾದ ಹರ್ಬಿನ್‌ನಲ್ಲಿ ನಡೆದಿದೆ.

ಶನಿವಾರ ಮುಂಜಾನೆ ಚೀನಾದ ಹಿಲೊನ್‌ಜಿಯಾಂಗ್ ಪ್ರಾಂತದ ರಾಜಧಾನಿ ಹರ್ಬಿನ್‌ನಲ್ಲಿರುವ ಹೊಟೇಲ್‌ನಲ್ಲಿ ಈ ದುರಂತ ಸಂಭವಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಘಟನೆಯಲ್ಲಿ ಹದಿನೆಂಟು ಮಂದಿ ಸಾವನ್ನಪ್ಪಿದ್ದರೆ 19 ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗಾಯಾಳುಗಳು ವಿಷಕಾರಿ ಅನಿಲ ಉಸಿರಾಡಿದ್ದಾರೆ ಮತ್ತು ಇನ್ನು ಕೆಲವರು ಸುಟ್ಟ ಗಾಯಗಳನ್ನು ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸದ್ಯ ಘಟನೆಗೆ ಕಾರಣ ಏನೆಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಚೀನಾದಲ್ಲಿ ಬೆಂಕಿ ರಕ್ಷಣೆ ನಿಯಮಗಳನ್ನು ನಿರ್ಲಕ್ಷಿಸುತ್ತಿರುವ ಪರಿಣಾಮವಾಗಿ ಬೆಂಕಿ ಅವಘಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಪ್ರಿಲ್‌ನಲ್ಲಿ ಹೊಟೇಲೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಹದಿನೆಂಟು ಮಂದಿ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News