ಕ್ಷಿಪ್ರ ನೆರೆಗಳ ಮಾಹಿತಿ ನೀಡಲಿವೆ ಸ್ಮಾರ್ಟ್‌ಫೋನ್‌ಗಳು: ಅಧ್ಯಯನ

Update: 2018-08-25 17:39 GMT

ನ್ಯೂಯಾರ್ಕ್, ಆ.25: ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ವಾತಾವರಣದ ಒತ್ತಡ, ತಾಪಮಾನ ಮತ್ತು ತೇವಾಂಶವನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ. ಮುಂದೊಂದು ದಿನ ಈ ಸ್ಮಾರ್ಟ್‌ಫೋನ್‌ಗಳ ಮೂಲಕ ಕ್ಷಿಪ್ರ ಪ್ರವಾಹಕ್ಕೆ ಕಾರಣವಾಗುವ ಹವಾಮಾನ ವಿನ್ಯಾಸವನ್ನು ಗಮನಿಸಲು ಸಾಧ್ಯವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಕೇವಲ ಕ್ಷಿಪ್ರ ಪ್ರವಾಹಗಳು ಮಾತ್ರವಲ್ಲ ಸ್ಮಾರ್ಟ್‌ಫೋನ್‌ಗಳ ಮೂಲಕ ಇತರ ನೈಸರ್ಗಿಕ ದುರಂತಗಳ ಬಗ್ಗೆಯೂ ಸೂಚನೆಗಳನ್ನು ಪಡೆಯಬಹುದಾಗಿದೆ ಎಂದು ಈ ಅಧ್ಯಯನ ತಿಳಿಸಿದೆ.

ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಸೆನ್ಸರ್‌ಗಳು ಗುರುತ್ವಾಕರ್ಷಣೆ, ನಮ್ಮ ಭೂಮಿಯ ಆಯಸ್ಕಾಂತೀಯ ಕ್ಷೇತ್ರ, ವಾತಾವರಣದ ಒತ್ತಡ, ಬೆಳಕಿನ ಮಟ್ಟ, ತೇವಾಂಶ, ತಾಪಮಾನ, ಧ್ವನಿಗಳ ಮಟ್ಟ ಹಾಗೂ ವಾತಾವರಣದಲ್ಲಿ ನಡೆಯುವ ಇತರ ವಿದ್ಯಾಮಾನಗಳನ್ನು ನಿರಂತರವಾಗಿ ಗಮನಿಸುತ್ತಲೇ ಇರುತ್ತದೆ ಎಂದು ಟೆಲ್ ಅವಿವ್ ವಿಶ್ವವಿದ್ಯಾಲಯದ ಉಪನ್ಯಾಸಕ ಹಾಗೂ ಮುಖ್ಯ ಸಂಶೋಧಕ ಕಾಲಿನ್ ಪ್ರೈಸ್ ತಿಳಿಸಿದ್ದಾರೆ.

ಇಂದು ಸುಮಾರು 3ರಿಂದ 4 ಬಿಲಿಯನ್ ಸ್ಮಾಟ್‌ಫೋನ್‌ಗಳಲ್ಲಿ ವಾತಾವರಣದ ಪ್ರಮುಖ ಅಂಕಿಅಂಶಗಳು ದಾಖಲಾಗಿವೆ. ಈ ಅಂಕಿಅಂಶಗಳು, ಪ್ರತಿವರ್ಷ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುವ ಪ್ರಾಕೃತಿಕ ದುರಂತಗಳು ಮತ್ತು ಹವಾಮಾನದ ಬಗ್ಗೆ ನಿಖರವಾಗಿ ತಿಳಿಯಲು ನಮ್ಮ ಸಾಮರ್ಥ್ಯವನ್ನು ಹೆಚ್ಚುಗೊಳಿಸಲು ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News