ಲಂಡನ್: ರಾಹುಲ್ ಸಭೆ ಅಡ್ಡಿಪಡಿಸುವ ಖಲಿಸ್ತಾನ್ ಬೆಂಬಲಿಗರ ಯತ್ನ ವಿಫಲ

Update: 2018-08-26 17:28 GMT

ಲಂಡನ್,ಆ.26: ಬ್ರಿಟನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ರವಿವಾರ ಭಾಷಣ ಮಾಡಲಿದ್ದ ಸಭೆಗೆ ಅಡ್ಡಿಪಡಿಸಲು ಖಲಿಸ್ತಾನ್ ಬೆಂಬಲಿಗರ ಗುಂಪೊಂದು ನಡೆಸಿದ ಯತ್ನ ವಿಫಲಗೊಂಡಿದೆ. ರಾಹುಲ್ ಆಗಮನಕ್ಕೆ ಮುನ್ನವೇ ಸ್ಕಾಟ್‌ಲ್ಯಾಂಡ್ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು, ಸ್ಥಳದಿಂದ ಹೊರಗೆ ಕರೆದೊಯ್ದರು.

ಮೂವರು ಪುರುಷರು ಹಾಗೂ ಓರ್ವ ಮಹಿಳೆಯಿದ್ದ ಈ ಗುಂಪು, ರಾಹುಲ್ ಭಾಷಣ ಮಾಡಲಿದ್ದ ರಾಮಡಾ ಹೊಟೇಲ್‌ನ ಸಭಾಂಗಣಕ್ಕೆ ಬಿಗಿಭದ್ರತೆಯ ನಡುವೆಯೂ ಅಬಹುತೇಕ ಕಾಂಗ್ರೆಸ್ ಬೆಂಬಲಿಗರು ಸೇರಿದಂತೆ ಸುಮಾರು 1 ಸಾವಿರ ಮಂದಿ ರಾಹುಲ್‌ರ ಭಾಷಣವನ್ನು ಆಲಿಸಲು ಅಲ್ಲಿ ಸೇರಿದ್ದರು.

ಬಿಗಿಭದ್ರತೆಯ ನಡುವೆಯೂ ಸಭಾಂಗಣದೊಳಗೆ ಪ್ರವೇಶಿಸಿ ಆಸೀನರಾಗಿದ್ದ ಖಲಿಸ್ತಾನಿ ಬೆಂಬಲಿಗರನ್ನು ಗುರುತಿಸಿದ ಕಾರ್ಯಕ್ರಮದ ಸಂಘಟಕರು ಅಲ್ಲಿಂದ ನಿರ್ಗಮಿಸುವಂತೆ ವಿನಂತಿಸಿದಾಗ ಅವರು ನಿರಾಕರಿಸಿದ್ದರು. ಆಗ ಕೂಡಲೇ ಪೊಲೀಸರನ್ನು ಕರೆಸಿ, ಅವರನ್ನು ಹೊರಕಳುಹಿಸಲಾಯಿತೆಂದು ಅಧಿಕೃತ ಮೂಲಗಳು ತಿಳಿಸಿವೆ.

ಆನಂತರ ಪ್ರತಿಭಟನಕಾರರು ಈ ಬಗ್ಗೆ ಹೇಳಿಕೆ ನೀಡಿ,1984ರಲ್ಲಿ ದಿಲ್ಲಿಯಲ್ಲಿ ನಡೆದ ಸಿಖ್ಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಶಾಮೀಲಾಗಿಲ್ಲವೆಂಬ ರಾಹುಲ್ ಹೇಳಿಕೆಯಿಂದ ಆಕ್ರೋಶಗೊಂಡಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News