ಸೆನೆಟರ್ ಜಾನ್ ಮೆಕೇನ್ ಇನ್ನಿಲ್ಲ

Update: 2018-08-26 17:42 GMT

ವಾಶಿಂಗ್ಟನ್,ಆ.26: ಅಮೆರಿಕದ ಹಿರಿಯ ಸೆನೆಟರ್, 2008ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಾನ್ ಮೆಕೇನ್ ಶನಿವಾರ ಅರಿ ರೆನಾದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯ ಸ್ಸಾಗಿತ್ತು.ಅವರು ಕಳೆದ ಕೆಲವು ತಿಂಗಳುಗಳಿಂದ ಮೆದುಳುಗಡ್ಡೆಯ ಕಾಯಿಲೆಯಿಂದ ಪೀಡಿತರಾಗಿದ್ದರು. ವಿಯೆಟ್ನಾಂ ಸಮರದಲ್ಲೂ ಭಾಗವಹಿಸಿದ್ದ ಮೆಕೇನ್ ಅಲ್ಲಿ ಯುದ್ಧಕೈದಿಯಾಗಿ ಐದು ವರ್ಷ ಸೆರೆಮನೆವಾಸ ಅನುಭವಿಸಿದ್ದರು.

 ಅರಿರೆನಾ ರಾಜ್ಯದ ಸೆನೆಟರ್ ಆಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮೇಕನ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಆಯ್ಕೆಗಾಗಿ ನಡೆದ ಚುನಾವಣೆಗೆ ಎರಡು ಬಾರಿ ಸ್ಪರ್ಧಿಸಿದ್ದರು. 2000ರಲ್ಲಿ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣೆಯಲ್ಲಿ ಅವರು ಜಾರ್ಜ್‌ಬುಶ್ ಎದುರು ಸ್ಪರ್ಧಿಸಿ, ಪರಾಭವಗೊಂಡಿದ್ದರು.2008ರಲ್ಲಿ ಅವರು ಅದ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾದರೂ, ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷದ ಬರಾಕ್ ಒಬಾಮ ಎದುರು ಸೋಲುಂಡಿದ್ದರು.

 ಆದಾಗ್ಯೂ ಮೆಕೇನ್ ತನ್ನ ಪಕ್ಷದವರೇ ಆದ ಡೊನಾಲ್ಡ್ ಟ್ರಂಪ್ ಅವರು, ಒಬಾಮಾ ಆಡಳಿತದಲ್ಲಿ ಜಾರಿಗೊಳಿಸಲಾಗಿದ್ದ ಸಮಗ್ರ ಆರೋಗ್ಯ ಯೋಜನೆಯನ್ನು 2017ರಲ್ಲಿ ರದ್ದುಪಡಿಸಲು ನಿರ್ಧರಿಸಿದಾಗ ಅದನ್ನು ಪ್ರಬಲವಾಗಿ ವಿರೋಧಿಸಿದ್ದರು.

ನೇರ, ನಿಷ್ಠುರ ರಾಜಕಾರಣಿಯೆಂದು ಹೆಸರಾದ ಮೆಕೇನ್ ಅವರು ತನ್ನ ಗಂಭೀರ ಅನಾರೋಗ್ಯದ ಹೊರತಾಗಿಯೂ ಸೆನೆಟ್‌ಗೆ ಆಗಮಿಸಿ, ಒಬಾಮಾ ಆಡಳಿತದಲ್ಲಿ ಜಾರಿಗೆ ತರಲಾಗಿದ್ದ ಸಮಗ್ರ ಆರೋಗ್ಯ ಯೋಜನೆಯ ರದ್ದತಿಗಾಗಿ ತನ್ನ ಪಕ್ಷ ಮಂಡಿಸಿದ ನಿರ್ಣಯದ ವಿರುದ್ಧ ಮತಚಲಾಯಿಸಿದ್ದರು.

ಜಾನ್ ಸಿಡ್ನಿ ಮೆಕೇನ್ ಅವರು 1936ರ ಆಗಸ್ಟ್ 29ರಂದು ಪನಾಮಾ ಕ್ಯಾನಲ್ ರೆನ್‌ನಲ್ಲಿ ಜನಿಸಿದ್ದರು. ಮೆಕೇನ್ ಅವರ ತಂದೆ ಹಾಗೂ ತಾತ, ಅಮೆರಿಕ ಸೇನೆಯಲ್ಲಿ ಆಡ್ಮಿರಲ್‌ಗಳಾಗಿ ಸೇವೆ ಸಲ್ಲಿಸಿದ್ದರು. ಮೆಕೇನ್ ಕೂಡಾ ಅಮೆರಿಕ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿದ್ದು, ವಿಯಟ್ನಾಂ ಯುದ್ಧದ ಸಮಯದಲ್ಲಿ ಉತ್ತರ ವಿಯೆಟ್ನಾಮ್‌ನ ಬಂಡುಕೋರರ ಕೈಗೆ ಸಿಕ್ಕಿ, ಐದು ವರ್ಷಗಳಿಗೂ ಅಧಿಕ ಕಾಲ ಸೆರೆಮನೆಯಲ್ಲಿದ್ದರು.

ಸೆನೆಟರ್ ಜಾನ್ ಮೆಕೇನ್ ಅವರ ಕುಟುಂಬಕ್ಕೆ ನನ್ನ ಗಾಢವಾದ ಅನುಕಂಪಗಳು ಹಾಗೂ ಗೌರವಗಳನ್ನು ಸಲ್ಲಿಸುತ್ತೇನೆ. ನಮ್ಮ ಹೃದಯ ಹಾಗೂ ಪ್ರಾರ್ಥನೆಗಳ ಅವರ ಜೊತೆಗಿರುವುದು.

ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News