ಪೌಷ್ಟಿಕಾಂಶ ಕೊರತೆ ಕುರಿತು ವಿಚಾರಣೆಗೆ ಉಚಿತ ಸಹಾಯವಾಣಿ

Update: 2018-08-27 14:54 GMT

ಹೊಸದಿಲ್ಲಿ,ಆ.27: ದೇಶದಲ್ಲಿ ಕಳವಳದ ಪ್ರಮುಖ ವಿಷಯವಾಗಿರುವ ಪೌಷ್ಟಿಕಾಂಶ ಮತ್ತು ಕುಪೋಷಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಉಚಿತ ಸಹಾಯವಾಣಿಯನ್ನು ಸೋಮವಾರ ಆರಂಭಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಇಲ್ಲಿ ತಿಳಿಸಿದರು.

ಏಕೀಕೃತ ಮಕ್ಕಳ ಅಭಿವೃದ್ಧಿ ಸೇವೆಗಳು(ಐಸಿಡಿಎಸ್),ಅಂಗನವಾಡಿಗಳ ಕಾರ್ಯಕರ್ತರಂತಹ ಭಾಗೀದಾರರು ಮತ್ತು ಸಾರ್ವಜನಿಕರೂ ಸಹ ಸಹಾಯವಾಣಿ ಸಂಖ್ಯೆ 14408ಕ್ಕೆ ಕರೆ ಮಾಡಿ ಪೌಷ್ಟಿಕತೆ ಮತ್ತು ಕುಪೋಷಣೆಗೆ ಸಂಬಂಧಿಸಿದಂತೆ ಹಿಂದಿ, ಇಂಗ್ಲೀಷ್ ಮತ್ತು ತೆಲುಗು ಭಾಷೆಗಳಲ್ಲಿ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಪೋಷಣ ಅಭಿಯಾನದಡಿ ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ. 2022ರ ವೇಳೆಗೆ ಆರು ವರ್ಷದೊಳಗಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ ಪ್ರಮಾಣವನ್ನು ಈಗಿನ ಶೇ.38.4ರಿಂದ ಶೇ.25ಕ್ಕೆ ತಗ್ಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News