ಬಿಜೆಪಿ ಸಂಸದರು ಕೇರಳ ನೆರೆ ಪರಿಹಾರಕ್ಕೆ 25 ಕೋಟಿ ರೂ. ನೀಡಿದ್ದರೆ? ಇಲ್ಲಿದೆ ವಾಸ್ತವಾಂಶ

Update: 2018-08-28 06:28 GMT

ಹೊಸದಿಲ್ಲಿ, ಆ.28: ‘‘ಬಿಜೆಪಿ ಸಚಿವರು ಹಾಗೂ ಸಂಸದರು ಕೇರಳಕ್ಕೆ ದೇಣಿಗೆ ನೀಡಿದ್ದಾರೆ, ನಿಮಗೆ ದೊರಕಿಲ್ಲ ಎಂದು ಹೇಳಬೇಡಿ’’ ಎಂದು ಹೇಳುವ ಪೋಸ್ಟ್ ಒಂದನ್ನು ಫೇಸ್ ಬುಕ್ ನಲ್ಲಿ ಶ್ರೀಕುಮಾರ್ ಶ್ರೀಧರನ್ ನಾಯರ್ ಎಂಬವರು ಶೇರ್ ಮಾಡಿದ್ದಾರೆ. ಈ ಪೋಸ್ಟ್ ಜತೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 25 ಕೋಟಿ ರೂ.ನ ಚೆಕ್ ಪಡೆಯುವ ಚಿತ್ರವಿದೆ. ಅವರ ಅಕ್ಕಪಕ್ಕದಲ್ಲಿ ಬಿಜೆಪಿ ಸಂಸದ ವಿ.ಮುರಳೀಧರನ್ ಹಾಗೂ ಕೇಂದ್ರ ಪ್ರವಾಸೋದ್ಯಮ ಸಹಾಯಕ ಸಚಿವ ಅಲ್ಫೋನ್ಸ್ ಕನ್ನಂತನಂ ಇದ್ದಾರೆ. ಈ ಪೋಸ್ಟ್ ಅನ್ನು 10,000ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

ಕೆಲವರು ಅದೇ ಚಿತ್ರವನ್ನು ಬಳಸಿಕೊಂಡು ಬಿಜೆಪಿ ಸಚಿವರು ಕೇರಳ ಮುಖ್ಯಮಂತ್ರಿಗೆ ನೆರೆ ಪರಿಹಾರ ಚೆಕ್ ನೀಡಿದ್ದಾರೆಂಬ ವಿವರಣೆ ನೀಡಿದ್ದಾರೆ.
ಆದರೆ ವಾಸ್ತವವಾಗಿ ಈ 25 ಕೋಟಿ ರೂ. ಚೆಕ್ ಅನ್ನು ಬಿಜೆಪಿ ಸಂಸದರು ನೀಡಿಲ್ಲ. ಬದಲಾಗಿ ಪೆಟ್ರೋಲಿಂ ಕಂಪೆನಿಗಳು ಆಗಸ್ಟ್ 21ರಂದು ನೀಡಿದ್ದವು. ಈ ಚೆಕ್ ಅನ್ನು ಬಿಜೆಪಿ ಸಂಸದರು ಜತೆಯಾಗಿ ಕೇರಳ ಸಿಎಂಗೆ ಹಸ್ತಾಂತರಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ಸಂಸದರು ದೇಣಿಗೆ ನೀಡಿದ್ದಾರೆಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣ ಪೋಸ್ಟ್ ಗಳು ಕಂಡು ಬಂದಿವೆ.

ತಾನು ಈ ಚೆಕ್ ಅನ್ನು ತೈಲ ಕಂಪೆನಿಗಳ ಪರವಾಗಿ ನೀಡಿದ್ದಾಗಿ ಬಿಜೆಪಿ ಸಂಸದ ಮುರಳೀಧರನ್ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಕೂಡ ಇದೇ ರೀತಿ ಟ್ವೀಟ್ ಮಾಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News