ಕೇರಳ ಪ್ರವಾಹ: ಮೋದಿ ಸರಕಾರವನ್ನು ಟೀಕಿಸಿ, ಪಿಣರಾಯಿ ವಿಜಯನ್ ರನ್ನು ಹೊಗಳಿದ ಆರೆಸ್ಸೆಸ್ ವೆಬ್ ಸೈಟ್ !

Update: 2018-08-28 11:57 GMT

ತಿರುವನಂತಪುರಂ, ಆ.28: ಕೇರಳ ಪ್ರವಾಹಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಸರಕಾರವನ್ನು ಟೀಕಿಸಿ, ಪಿಣರಾಯಿ ವಿಜಯನ್ ಸರಕಾರವನ್ನು ಹೊಗಳಿದ್ದ ಸಂಪಾದಕೀಯವನ್ನು ಆರೆಸ್ಸೆಸ್ ನ ಮಲಯಾಳಂ ವೆಬ್ ಸೈಟ್ ಒಂದು ಇದೀಗ ತೆಗೆದು ಹಾಕಿದೆ. ಈ ದುರಂತಕ್ಕೆ ‘ರಾಜಕೀಯ ಬಣ್ಣ’ ನೀಡುತ್ತಿರುವುದಕ್ಕೂ ಮೋದಿ ಸರಕಾರವನ್ನು ‘ಕೇಸರಿ’ ವೆಬ್ ಸೈಟ್ ನ ಸಂಪಾದಕೀಯ ಟೀಕಿಸಿತ್ತು.

“ಕೇಸರಿಯ ವೆಬ್ ಸೈಟನ್ನು ಹ್ಯಾಕ್ ಮಾಡಿದ ಯಾರೋ ಸಂಪಾದಕೀಯ ವಿಭಾಗದಲ್ಲಿ ಅಂಕಣವನ್ನು ಪ್ರಕಟಿಸಿದ್ದಾರೆ. ಆಗಸ್ಟ್ 22ರಂದೇ ಅದನ್ನು ಡಿಲಿಟ್ ಮಾಡಲಾಗಿದೆ. ಕೇಂದ್ರ ಸರಕಾರ ಕೇರಳದೊಂದಿಗೆ ತಾರತಮ್ಯ ಮಾಡುತ್ತಿದೆ ಎಂದಿದ್ದ ಆ ಅಂಕಣಕ್ಕೂ ನಮಗೂ ಸಂಬಂಧವಿಲ್ಲ. ಪೊಲೀಸರು ಹಾಗು ಸೈಬರ್ ಸೆಲ್ ಗೆ ಈ ಬಗ್ಗೆ ದೂರು ನೀಡಲಾಗಿದೆ” ಎಂದು ‘ಕೇಸರಿ’ಯ ಸಂಪಾದಕ ಎನ್.ಆರ್. ಮಧು ತಿಳಿಸಿದ್ದಾರೆ.

ಈ ಬರಹದಲ್ಲಿ ವಿಶೇಷವೆಂದರೆ ಪಿಣರಾಯಿ ವಿಜಯನ್ ಸರಕಾರದ ಕಾರ್ಯ ವೈಖರಿಯನ್ನು ಹೊಗಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News