2 ಚಕ್ರಗಳಿಲ್ಲದೆಯೇ ಭೂಸ್ಪರ್ಶ ಮಾಡಿದ ವಿಮಾನ !

Update: 2018-08-28 18:18 GMT

ಶಾಂಘೈ (ಚೀನಾ), ಆ. 28: 166 ಮಂದಿಯನ್ನು ಹೊತ್ತ ಚೀನಾದ ಪ್ರಯಾಣಿಕ ವಿಮಾನವೊಂದು ಎರಡು ಚಕ್ರಗಳು ಇಲ್ಲದೆಯೇ ಮಂಗಳವಾರ ಶೆಂಝನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಸಮೀಪದ ಮಕಾವ್‌ನಲ್ಲಿ ಭೂಸ್ಪರ್ಶ ಮಾಡುವ ನಿರ್ಧಾರವನ್ನು ಬದಲಿಸಿದ ಪೈಲಟ್‌ಗಳು ಶೆಂಝನ್‌ನಲ್ಲಿ ಭೂಸ್ಪರ್ಶ ಮಾಡಲು ನಿರ್ಧರಿಸಿದರು ಹಾಗೂ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಬಳಿಕ ವಿಮಾನವನ್ನು ಸುಮಾರು 40 ಕಿ.ಮೀ. ದೂರದಲ್ಲಿರುವ ಶೆಂಝನ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ವಿಮಾನದ ಒಂದು ಇಂಜಿನ್‌ನಲ್ಲಿ ದೋಷ ಕಾಣಿಸಿತ್ತು ಎಂಬುದಾಗಿಯೂ ಸಿಬ್ಬಂದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News