ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ

Update: 2018-08-29 07:53 GMT

ಹೊಸದಿಲ್ಲಿ, ಆ.29: ಭಾರತದ ರೂಪಾಯಿ ಮೌಲ್ಯ ಅಮೆರಿಕ ಡಾಲರ್ ಎದುರು ಇಂದು ಮತ್ತೆ ಕುಸಿತ ಕಂಡಿದೆ. ಡಾಲರ್ ಎದುರು 42 ಪೈಸೆ ಕುಸಿತ ಕಂಡಿರುವ ರೂಪಾಯಿ ಸಾರ್ವಕಾಲಿಕ ಕನಿಷ್ಠ 70.52ಕ್ಕೆ ಕುಸಿದಿದೆ. ಅಮೆರಿಕ ಕರೆನ್ಸಿಗಾಗಿ ಹೆಚ್ಚಿದ ಬೇಡಿಕೆ ಹಾಗೂ ವಿದೇಶಿ ನಿಧಿಯ ಹೊರಹರಿವಿನ ಹೆಚ್ಚಳ ಡಾಲರ್ ಮೌಲ್ಯ ಹೆಚ್ಚಳಕ್ಕೆ ಕಾರಣ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಕಚ್ಚಾ ತೈಲ ಬೆಲೆ ಹೆಚ್ಚಳವಾದ ಬಳಿಕ ಆಮದುದಾರರು ಅದರಲ್ಲೂ ಮುಖ್ಯವಾಗಿ ತೈಲ ಸಂಸ್ಕರಣಾಗಾರಗಳು ಅಮೆರಿಕ ಕರೆನ್ಸಿಗೆ ಬೇಡಿಕೆ ಇಟ್ಟಿರುವುದು ರೂಪಾಯಿ ಮೌಲ್ಯಕ್ಕೆ ಹೊಡೆತ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News