ಟೇಬಲ್ ಟೆನಿಸ್: ಮಣಿಕಾ, ಶರತ್‌ಗೆ ಕಂಚು
Update: 2018-08-29 23:58 IST
ಜಕಾರ್ತ, ಆ.29: ಏಶ್ಯನ್ ಗೇಮ್ಸ್‌ನ ಟೇಬಲ್ ಟೆನಿಸ್‌ನ ಮಿಶ್ರ ಡಬಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿ ಮೊದಲೆರಡು ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದ ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬುಧವಾರ ನಡೆದ ಸೆಮಿ ಫೈನಲ್‌ನಲ್ಲಿ ಬಾತ್ರಾ ಹಾಗೂ ಕಮಲ್ ಚೀನಾದ ಎದುರಾಳಿ ವಾಂಗ್ ಚುಖ್ವಿನ್ ಹಾಗೂ ಸನ್ ಯಿಂಗ್‌ಶಾ ವಿರುದ್ಧ 9-11, 5-11, 13-11, 4-11, 8-11 ಅಂತರದಿಂದ ಸೋತಿದ್ದಾರೆ.