ಉತ್ತರಪ್ರದೇಶದ ಮೆಸೆಂಜರ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ 3,700 ಪಿಎಚ್‌ಡಿ ಪದವೀಧರರು

Update: 2018-08-30 17:55 GMT

ಹೊಸದಿಲ್ಲಿ, ಆ. 30: ಉತ್ತರಪ್ರದೇಶ ಪೊಲೀಸ್‌ನ ಕನಿಷ್ಠ ಐದನೇ ತರಗತಿ ವಿದ್ಯಾರ್ಹತೆ ಹೊಂದಿರುವ ಟೆಲಿಕಾಂ ಮೆಸೆಂಜರ್ ಹುದ್ದೆಗೆ 50 ಸಾವಿರ ಪದವೀಧರರು, 28,000 ಸ್ನಾತಕೋತ್ತರ ಪದವೀಧರರು ಹಾಗೂ 3700 ಪಿಎಚ್‌ಡಿ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ದೇಶದಲ್ಲಿರುವ ನಿರುದ್ಯೋಗದ ತೀವ್ರ ಸಮಸ್ಯೆಯನ್ನು ಇದು ಬಹಿರಂಗಗೊಳಿಸಿದೆ.

ಅರ್ಜಿದಾರದಲ್ಲಿ ಎಂಬಿಎ ಹಾಗೂ ಎಂಟೆಕ್ ಪದವೀಧರರು ಕೂಡ ಇದ್ದಾರೆ. 93,000 ಅಭ್ಯರ್ಥಿಗಳಲ್ಲಿ 7,400 ಅಭ್ಯರ್ಥಿಗಳು ಮಾತ್ರ 5ರಿಂದ 12ನೇ ತರಗತಿ ವರಗೆ ಶಿಕ್ಷಣ ಪಡೆದಿದ್ದಾರೆ. ಟೆಲಿಕಾಂ ಇಲಾಖೆಯ ಸಂದೇಶವನ್ನು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ತಲುಪಿಸುವ ಕೆಲಸವನ್ನು ಈ ಹುದ್ದೆ ಹೊಂದಿದೆ. ಒಟ್ಟು 62 ಹುದ್ದೆಗಳು ಮಾತ್ರ ಖಾಲಿ ಇವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News