ಹವಳ ದಿಬ್ಬದ ರಕ್ಷಣೆಗೆ ಜಲ ರೋಬೊಟ್ ಸಿದ್ಧ

Update: 2018-08-31 17:09 GMT

ಸಿಡ್ನಿ, ಆ. 31: ‘ಗ್ರೇಟ್ ಬ್ಯಾರಿಯರ್’ ಹವಳ ದಿಬ್ಬವನ್ನು ತಿನ್ನುತ್ತಿರುವ ನಕ್ಷತ್ರಮೀನುಗಳನ್ನು ಹುಡುಕಿ ಕೊಲ್ಲುವ, ನೀರಿನಡಿಯಲ್ಲಿ ಕಾರ್ಯಾಚರಿಸುವ ರೋಬೊಟನ್ನು ಆಸ್ಟ್ರೇಲಿಯ ಸಂಶೋಧಕರು ಶುಕ್ರವಾರ ಅನಾವರಣಗೊಳಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗೂಗಲ್ ನೀಡಿದ ಅನುದಾನದಿಂದ ‘ರೇಂಜರ್‌ಬೊಟ್’ ಎಂಬ ಹೆಸರಿನ ಈ ರೋಬೊಟನ್ನು ಅಭಿವೃದ್ಧಿಪಡಿಸಿದ್ದಾರೆ.

ಆಸ್ಟ್ರೇಲಿಯದ ಈಶಾನ್ಯ ಕರಾವಳಿಯ ಸಮುದ್ರದಲ್ಲಿರುವ ವಿಶಾಲ ವಿಶ್ವ ಪಾರಂಪರಿಕ ತಾಣವನ್ನು ಈ ರೋಬೊಟ್ ಸಂರಕ್ಷಿಸಲಿದೆ.

ಮಾಲಿನ್ಯ ಮತ್ತು ಕೃಷಿ ತ್ಯಾಜ್ಯ ನೀರಿನಿಂದಾಗಿ ಇತ್ತೀಚಿನ ದಿನಗಳಲ್ಲಿ ನಕ್ಷತ್ರ ಮೀನುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ವೃದ್ಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News