ಮೊಟ್ಟಮೊದಲ ಬಾರಿಗೆ ಇತರ ಹಿಂದುಳಿದ ವರ್ಗಗಳ ಜನಗಣತಿ

Update: 2018-08-31 17:33 GMT

ಹೊಸದಿಲ್ಲಿ, ಆ.31: ಸೆನ್ಸಸ್ 2021ರಲ್ಲಿ ಇದೇ ಮೊದಲ ಬಾರಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನಗಣತಿ ನಡೆಸಿ ಅಂಕಿಅಂಶಗಳನ್ನು ಸಂಗ್ರಹಿಸಲಾಗುವುದು ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.

ಸೆನ್ಸಸ್ 2021ರ ವರದಿಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಈ ಹಿಂದೆ ಜನಗಣತಿಗಳ ವರದಿಯನ್ನು ಒಪ್ಪಿಸಲು ಏಳರಿಂದ ಎಂಟು ವರ್ಷಗಳ ಕಾಲಮಿತಿಯ ಅಗತ್ಯವಿತ್ತು. ಜನಗಣತಿ 2021ನ್ನು ನಡೆಸಲು ಯೋಜನೆಯ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಚರ್ಚೆ ನಡೆಸಿದ್ದಾರೆ. ಈ ವೇಳೆ ಜನಗಣತಿಯ ವರದಿಯನ್ನು ಮೂರು ವರ್ಷಗಳ ಒಳಗೆ ಸಿದ್ಧಪಡಿಸಲು ಸಾಧ್ಯವಾಗುವಂತೆ ವಿನ್ಯಾಸ ಮತ್ತು ತಾಂತ್ರಿಕತೆಯಲ್ಲಿ ಸುಧಾರಣೆಗಳನ್ನು ಮಾಡುವುದಕ್ಕೆ ಒತ್ತು ನೀಡಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. ಈ ಬೃಹತ್ ಜನಗಣತಿಯನ್ನು ನಡೆಸಲು 25 ಲಕ್ಷ ಎಣಿಕೆದಾರರನ್ನು ನೇಮಿಸಲಾಗಿದ್ದು ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಜನಗಣತಿ 2021ರಲ್ಲಿ ನಿಖರವಾದ ಅಂಕಿಅಂಶಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಗಳನ್ನು ಪಟ್ಟಿ ಮಾಡುವ ವೇಳೆ ಭೂಪಟಗಳ ಬಳಕೆ ಮತ್ತು ಭೌಗೋಳಿಕ ಹೋಲಿಕೆ ಮಾಡುವ ಕ್ರಮಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News