ಕಠ್ಮಂಡು: ರನ್‌ವೇಯಿಂದ ಜಾರಿದ ವಿಮಾನ; 12 ತಾಸು ವಿಮಾನ ನಿಲ್ದಾಣ ಬಂದ್

Update: 2018-09-02 17:13 GMT

ಕಠ್ಮಂಡು, ಸೆ. 2: ನೇಪಾಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇತ್ತೀಚೆಗೆ ದುರಸ್ತಿಯಾದ ರನ್‌ವೇಯೊಂದರಿಂದ ದೇಶಿ ವಿಮಾನವೊಂದು ಶನಿವಾರ ರಾತ್ರಿ ಹೊರಜಾರಿದೆ.

ಇದರ ಪರಿಣಾಮವಾಗಿ 12 ತಾಸುಗಳ ಕಾಲ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು ಹಾಗೂ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದರು ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಯೇತಿ ಏರ್‌ಲೈನ್ಸ್ ವಿಮಾನವೊಂದು ರನ್‌ವೇಯಿಂದ ಜಾರಿದ ಬಳಿಕ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು ಎಂದು ‘ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.

ವಿಮಾನವು ನೇಪಾಳ್‌ಗಂಜ್‌ನಿಂದ ಕಠ್ಮಂಡುಗೆ 21 ಪ್ರಯಾಣಿಕರನ್ನು ಒಯ್ಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News