ಪರಿಸರ ಸ್ನೇಹಿ ಗಣೇಶನಿರಲಿ

Update: 2018-09-03 18:31 GMT

ಮಾನ್ಯರೇ,

ನಾಡಿನಲ್ಲಿ ಹಬ್ಬಗಳ ಮಾಸ ಆರಂಭವಾಗಿದೆ. ಚೌತಿಗಾಗಿ ಮನೆ ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಕೂರಿಸುವ ಗಣೇಶ ನ ಮೂರ್ತಿಗಳ ಮಾರಾಟ ಆರಂಭವಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಮಾರಾಟವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಹಿಂದೆಯೇ ನಿಷೇಧಿಸಿತ್ತು. ಆದರೆ ಮೂರ್ತಿ ಮಾಡುವವರು ಕೆಲಸ ಸುಲಭವಾಗುತ್ತದೆ ಎಂಬ ಕಾರಣಕ್ಕೆ ರಾಸಾಯನಿಕ ಬಣ್ಣಗಳಿಂದ ಬಳಸಿದ ಪಿಒಪಿ ಮೂರ್ತಿಗಳನ್ನು ತಯಾರಿಸುತ್ತಾರೆ. ಪರಿಸರದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಣ್ಣಿನ ಮೂರ್ತಿ, ಸೀಡ್‌ಬಾಲ್ ಗಣಪತಿ ಮೂರ್ತಿಗಳನ್ನು ಕೂರಿಸುವವರ ಸಂಖ್ಯೆಯು ಸಾಕಷ್ಟಿದೆ. ಆದರೆ ಇದು ಸಣ್ಣ ಅಭಿಯಾನವಾಗಿ ಉಳಿದಿದೆಯೇ ಹೊರತು ಭಕ್ತರ ಶ್ರದ್ಧೆಯ ಒಂದು ಭಾಗವಾಗಿಲ್ಲ.
ಲಕ್ಷಾಂತರ ಮಂದಿಯ ಶ್ರದ್ಧೆ, ಆಚರಣೆಗಳನ್ನು ಯಾವುದೇ ಕಟ್ಟುನಿಟ್ಟಿನ ಕಾನೂನುಗಳಿಂದ ತಡೆಯಲು ಸಾಧ್ಯವಿಲ್ಲ. ಬದಲಾವಣೆ ಏನಿದ್ದರೂ ಸಮಾಜದ ಅಂತರಂಗದಲ್ಲೇ ಮೂಡಬೇಕು. ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಇವುಗಳಿಗೆ ಪರ್ಯಾಯವಾಗಿ ಮಣ್ಣಿನ, ಬಣ್ಣರಹಿತ ಮೂರ್ತಿಗಳನ್ನು ಕೂರಿಸಬಹುದು. ಜನರು ಹೆಚ್ಚು ಹೆಚ್ಚಾಗಿ ಈ ಮೂರ್ತಿಗಳ ಬಗ್ಗೆ ಕೇಳಲಾರಂಭಿಸಿದರೆ ತಯಾರಕರು ಕೂಡಾ ಖಂಡಿತ ಎಚ್ಚೆತ್ತುಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News