ಕುಕ್ ಆಯ್ಕೆ ಮಾಡಿರುವ ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರಲ್ಲಿ ಭಾರತೀಯರಿಗೆ ಸ್ಥಾನವಿಲ್ಲ!

Update: 2018-09-05 05:36 GMT

ಲಂಡನ್, ಸೆ.5: ಇಂಗ್ಲೆಂಡ್ ಹಿರಿಯ ದಾಂಡಿಗ ಅಲಿಸ್ಟೈರ್ ಕುಕ್ ದಿ ಓವಲ್‌ನಲ್ಲಿ ಸೆ.7 ರಿಂದ ಆರಂಭವಾಗುವ ಭಾರತ ವಿರುದ್ಧ 5ನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ 33ರ ಹರೆಯದ ಕುಕ್ ತನ್ನ ಫೇಸ್‌ಬುಕ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರ ಹೆಸರನ್ನು ಬರೆದಿದ್ದಾರೆ.

 ಅಚ್ಚರಿಯೆಂದರೆ ಕುಕ್ ಹೆಸರಿಸಿರುವ 11 ಆಟಗಾರರಲ್ಲಿ ಭಾರತದ ಯಾವೊಬ್ಬ ಆಟಗಾರನೂ ಇಲ್ಲ. ಕುಕ್ ಆಯ್ಕೆ ಮಾಡಿರುವ ತಂಡಕ್ಕೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಗ್ರಹಾಂ ಗೂಚ್ ನಾಯಕನಾಗಿದ್ದಾರೆ. ಗೂಚ್‌ರೊಂದಿಗೆ ಆಸ್ಟ್ರೇಲಿಯದ ಮಾಜಿ ದಾಂಡಿಗ ಮ್ಯಾಥ್ಯೂ ಹೇಡನ್‌ರನ್ನು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.

ಕುಕ್ ತಂಡದಲ್ಲಿ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ಎಡಿ ಡಿ ವಿಲಿಯರ್ಸ್, ಕುಮಾರ ಸಂಗಕ್ಕರ ಹಾಗೂ ಜಾಕ್ ಕಾಲಿಸ್‌ರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಜೇಮ್ಸ್ ಆ್ಯಂಡರ್ಸನ್ ಹಾಗೂ ಗ್ಲೆನ್ ಮೆಕ್‌ಗ್ರಾತ್‌ರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News