ಫಿಲಿಪ್ಪೀನ್ಸ್: ಡುಟರ್ಟ್‌ರ ಮಾದಕ ದ್ರವ್ಯ ಪಟ್ಟಿಯಲ್ಲಿದ್ದ ಮೇಯರ್ ಹತ್ಯೆ

Update: 2018-09-05 17:48 GMT

ಮನಿಲಾ (ಫಿಲಿಪ್ಪೀನ್ಸ್), ಸೆ. 5: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್‌ರ ಮಾದಕ ದ್ರವ್ಯ ನಂಟು ಹೊಂದಿದ ಅಧಿಕಾರಿಗಳ ಪಟ್ಟಿಯಲ್ಲಿದ್ದ ಮೇಯರ್ ಒಬ್ಬರನ್ನು ಬುಧವಾರ ಅವರ ಕಚೇರಿಯಲ್ಲೇ ಗುಂಡು ಹಾರಿಸಿ ಕೊಲ್ಲಲಾಗಿದೆ.

ದಕ್ಷಿಣದ ನಗರ ರೊಂಡದ ಮೇಯರ್ ಮರಿಯಾನೊ ಬ್ಲಾಂಕೊ ಹತ್ಯೆಗೊಳಗಾದವರು.

59 ವರ್ಷದ ಬ್ಲಾಂಕೊರನ್ನು ಅವರ ಕಚೇರಿಯಲ್ಲಿ ಮಧ್ಯರಾತ್ರಿಯ ಬಳಿಕ ಗುಂಡು ಹಾರಿಸಿ ಕೊಲ್ಲಲಾಯಿತು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದರು.

‘‘ಶಸ್ತ್ರಗಳನ್ನು ಹೊಂದಿದ್ದ ನಾಲ್ವರು ಬಿಳಿ ವ್ಯಾನೊಂದರಿಂದ ಇಳಿದರು ಹಾಗೂ ಮುನಿಸಿಪಲ್ ಹಾಲ್ ಪ್ರವೇಶಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆ ಸಂದರ್ಭದಲ್ಲಿ ಮೇಯರ್ ತನ್ನ ಕಚೇರಿಯಲ್ಲಿ ನಿದ್ರಿಸುತ್ತಿದ್ದರು’’ ಎಂದು ಪೊಲೀಸ್ ಮುಖ್ಯಸ್ಥರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News