ಬೆಡೂಯಿನ್ ಗ್ರಾಮ ಧ್ವಂಸಗೊಳಿಸಲು ಇಸ್ರೇಲ್ ಸುಪ್ರಿಂ ಕೋರ್ಟ್ ಅಸ್ತು

Update: 2018-09-05 17:53 GMT

ಜೆರುಸಲೇಮ್, ಸೆ. 5: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಬೆಡೂಯಿನ್ ಸಮುದಾಯದ ಗ್ರಾಮವನ್ನು ಧ್ವಂಸಗೊಳಿಸಲು ಇಸ್ರೇಲ್ ಸುಪ್ರೀಂ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ.

ಖಾನ್ ಅಲ್-ಅಹ್ಮದ್ ಗ್ರಾಮವನ್ನು ಧ್ವಂಸಗೊಳಿಸುವುದನ್ನು ನಿಲ್ಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹಾಗೂ, ಗ್ರಾಮವನ್ನು ಧ್ವಂಸಗೊಳಿಸದಂತೆ ನೀಡಲಾಗಿದ್ದ ತಾತ್ಕಾಲಿಕ ತಡೆಯಾಜ್ಞೆಯು ಇನ್ನೊಂದು ವಾರದಲ್ಲಿ ಕೊನೆಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಖಾನ್ ಅಲ್-ಅಹ್ಮದ್ ಗ್ರಾಮದಲ್ಲಿ ಕುರಿ ಮತ್ತು ಆಡುಗಳನ್ನು ಸಾಕುವ ಸುಮಾರು 180 ಬೆಡೂಯಿನ್ ಸಮುದಾಯದ ಜನರು ಸಣ್ಣ ತಗಡಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಇದು ಜೆರುಸಲೇಮ್‌ನ ಹೊರಗೆ ಎರಡು ಇಸ್ರೇಲಿ ವಸಾಹತುಗಳ ನಡುವೆ ಇದೆ. ಈ ಗುಡಿಸಲುಗಳನ್ನು ಇಸ್ರೇಲ್‌ನ ಅನುಮತಿ ಇಲ್ಲದೆ ನಿರ್ಮಿಸಲಾಗಿತ್ತು.

ಆದರೆ, ಇಸ್ರೇಲ್‌ನ ಅನುಮತಿ ಪಡೆಯುವುದು ಅಸಾಧ್ಯ ಎಂದು ಫೆಲೆಸ್ತೀನಿಯರು ಹೇಳುತ್ತಾರೆ.

ಅಲ್ಲಿನ ನಿವಾಸಿಗಳನ್ನು ಸುಮಾರು 12 ಕಿ.ಮೀ. ದೂರದಲ್ಲಿರುವ ಫೆಲೆಸ್ತೀನಿ ಗ್ರಾಮ ಅಬು ದಿಸ್‌ನ ಸಮೀಪದ ಸ್ಥಳವೊಂದಕ್ಕೆ ಸ್ಥಳಾಂತರಿಸುವುದಾಗಿ ಇಸ್ರೇಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News