ದಿಟ್ಟ ಕ್ರಮಗಳಿಂದ ಜಾಗತಿಕ ಆರ್ಥಿಕತೆಗೆ ಇಂಬು

Update: 2018-09-05 18:01 GMT

ಪ್ಯಾರಿಸ್, ಸೆ. 5: ಹವಾಮಾನ ಬದಲಾವಣೆಗೆ ಸಂಬಂಧಿಸಿ ತೆಗೆದುಕೊಳ್ಳುವ ಮಹತ್ವಾಕಾಂಕ್ಷಿ ಕ್ರಮಗಳು ಜಾಗತಿಕ ಆರ್ಥಿಕತೆಗೆ 2030ರ ವೇಳೆಗೆ ಹೆಚ್ಚುವರಿ 26 ಟ್ರಿಲಿಯನ್ ಡಾಲರ್ (ಸುಮಾರು 1860 ಲಕ್ಷ ಕೋಟಿ ಡಾಲರ್) ದೇಣಿಗೆ ನೀಡಬಹುದಾಗಿದೆ ಎಂದು ಅಂತಾರಾಷ್ಟ್ರೀಯ ಪರಿಣತರು ಬುಧವಾರ ಹೇಳಿದ್ದಾರೆ.

 ಇಂಗಾಲದ ಡೈ ಆಕ್ಸೈಡ್‌ನ ಕಡಿಮೆ ಹೊರಸೂಸುವಿಕೆಯು ಆರ್ಥಿಕತೆಗೆ ನೀಡುವ ದೇಣಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಮಾಜಿ ಸರಕಾರಿ ಮುಖ್ಯಸ್ಥರು, ಉನ್ನತ ಆರ್ಥಿಕ ಪರಿಣತರು ಹಾಗೂ ಉದ್ಯಮ ಮುಖಂಡರನ್ನೊಳಗೊಂಡ ಸಂಸ್ಥೆ ‘ಗ್ಲೋಬಲ್ ಕಮಿಶನ್ ಆನ್ ದಿ ಎಕಾನಮಿ ಆ್ಯಂಡ್ ಕ್ಲೈಮೇಟ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News