ಟ್ರಂಪ್‌ರಿಂದ ಭಾರತ ಜೊತೆಗಿನ ಸಂಬಂಧ ನಿರ್ಲಕ್ಷ: ರಾಜತಾಂತ್ರಿಕ

Update: 2018-09-05 18:03 GMT

ವಾಶಿಂಗ್ಟನ್, ಸೆ. 5: ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲು. ಬುಶ್ ಮತ್ತು ಬರಾಕ್ ಒಬಾಮರಂತಲ್ಲದೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಜೊತೆಗಿನ ಮಹತ್ವದ ಸಂಬಂಧವನ್ನು ನಿರ್ಲಕ್ಷಿಸಿದ್ದಾರೆ ಎಂದು ಭಾರತಕ್ಕೆ ಅಮೆರಿಕದ ಮಾಜಿ ರಾಯಭಾರಿ ಟಿಮ್ ರೋಮರ್ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕಗಳ ನಡುವೆ ಗುರುವಾರ ನಡೆಯಲಿರುವ 2+2 ಮಾತುಕತೆಗಳ ಮುನ್ನಾ ದಿನ ‘ಫಾರೀನ್ ಪಾಲಿಸಿ’ ಮ್ಯಾಗಝಿನ್‌ನಲ್ಲಿ ಬರೆದ ಲೇಖನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜುಲೈ 6ರಂದು ವಾಶಿಂಗ್ಟನ್‌ನಲ್ಲಿ ನಡೆಯಬೇಕಾಗಿದ್ದ ಈ ಮಾತುಕತೆಯನ್ನು ಅಮೆರಿಕ ಈಗಾಗಲೇ ‘ಅನಿವಾರ್ಯ ಕಾರಣ’ಗಳಿಗಾಗಿ ಎರಡು ಬಾರಿ ಮುಂದೂಡಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ತೃಪ್ತಿಕರ ಪ್ರಗತಿಯನ್ನು ಸಾಧಿಸದೆ ಇದ್ದ ಕಾರಣಕ್ಕಾಗಿ, ಅದಕ್ಕೆ ನೀಡಬೇಕಾಗಿದ್ದ 300 ಮಿಲಿಯ ಡಾಲರ್ ನೆರವನ್ನು ರದ್ದುಪಡಿಸಲಾಗಿದೆ. ಇದೇನೂ ಹೊಸ ವಿಷಯವಲ್ಲ. ಅವರಿಗೆ ಈ ಬಗ್ಗೆ ಕಳೆದ ಬೇಸಿಗೆಯಲ್ಲೇ ತಿಳಿಸಲಾಗಿದೆ.

ಮೈಕ್ ಪಾಂಪಿಯೊ, ಅಮೆರಿಕ ವಿದೇಶ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News