ಭಾಂಬ್ರಿ, ಶರಣ್ ಅಲಭ್ಯ

Update: 2018-09-05 18:31 GMT

ಹೊಸದಿಲ್ಲಿ, ಸೆ.5:ಭಾರತದ ಅಗ್ರ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಹಾಗೂ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಡಬಲ್ಸ್ ಆಟಗಾರ ದಿವಿಜ್ ಶರಣ್ ಸರ್ಬಿಯ ವಿರುದ್ಧ ನಡೆಯಲಿರುವ ಡೇವಿಸ್‌ಕಪ್ ವರ್ಲ್ಡ್ ಪ್ಲೇ-ಆಫ್ ಪಂದ್ಯದಿಂದ ಹೊರಗುಳಿದಿದ್ದಾರೆ.

ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಭಾಂಬ್ರಿ ಹಾಗೂ ಶರಣ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಯುವ ಆಟಗಾರ ಸುಮಿತ್ ನಗಾಲ್ ಮೀಸಲು ಆಟಗಾರನಾಗಿ ತಂಡ ಸೇರಲು ನಿರಾಕರಿಸಿದ್ದಾರೆ.

ಪಾಲೆಂಬಾಂಗ್‌ನಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದ ಶರಣ್ ಭುಜನೋವಿನಿಂದ ಬಳಲುತ್ತಿದ್ದಾರೆ. ಭಾಂಬ್ರಿಗೆ ಯುಎಸ್ ಓಪನ್ ವೇಳೆ ಮಂಡಿನೋವು ಕಾಣಿಸಿಕೊಂಡಿದೆ. ಭಾಂಬ್ರಿ ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಪೀರ್-ಹ್ಯೂಸ್ ಹೆರ್ಬರ್ಟ್‌ಗೆ ಸೋತಿದ್ದರು.

 ಆರು ಸದಸ್ಯರ ತಂಡದಲ್ಲಿ ಮೀಸಲು ಆಟಗಾರನಾಗಿದ್ದ ಸಾಕೇತ್ ಮೈನೇನಿ ಅವರು ಭಾಂಬ್ರಿ ಬದಲಿಗೆ ಆಡಲಿದ್ದಾರೆ. ಎನ್.ಶ್ರೀರಾಮ್ ಬಾಲಾಜಿ ಅವರು ಶರಣ್ ಬದಲಿಗೆ ಆಡಲಿದ್ದು, ಪುಣೆಯ ಪ್ರತಿಭಾವಂತ ಆಟಗಾರ ಅರ್ಜುನ್ ಖಾಡೆ ಅವರು ಕ್ರಾಲಿಜೆವೊರೊಂದಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಡೇವಿಸ್ ಕಪ್ ಸೆ.14 ರಿಂದ 16ರ ತನಕ ನಡೆಯಲಿದೆ.

‘‘ಭಾಂಬ್ರಿ, ಶರಣ್ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಶರಣ್ ಅಮೆರಿಕದಲ್ಲಿ ಎಂಆರ್‌ಐ ಸ್ಕಾನಿಂಗ್‌ಗೆ ಒಳಗಾಗಿದ್ದು ಗುಣಮುಖರಾಗಲು ಕನಿಷ್ಠ 3 ವಾರಗಳು ಬೇಕು. ಯೂಕಿ ಮಂಡಿನೋವಿನಿಂದ ಬಳಲುತ್ತಿದ್ದಾರೆ’’ ಎಂದು ಎಐಟಿಎ ಆಯ್ಕೆ ಸಮಿತಿ ಅಧ್ಯಕ್ಷ ಎಸ್.ಪಿ. ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News