ಏಶ್ಯನ್ ಗೇಮ್ಸ್‌ ಚಾಂಪಿಯನ್ ಶೂಟರ್ ಸೌರಭ್ ಈಗ ವಿಶ್ವ ಜೂನಿಯರ್ ಚಾಂಪಿಯನ್

Update: 2018-09-06 05:39 GMT

 ಚಾಂಗ್ವಾನ್, ಸೆ.6: ಇತ್ತೀಚೆಗೆ ಇಂಡೋನೇಶ್ಯಾದಲ್ಲಿ ಕೊನೆಗೊಂಡ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ 16ರ ಬಾಲಕ ಸೌರಭ್ ಚೌಧರಿ ಚಿನ್ನದ ಓಟ ಮುಂದುವರಿಸಿದ್ದು ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ಐಎಸ್‌ಎಸ್‌ಎಫ್ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಗುರುವಾರ ನಡೆದ ಜೂನಿಯರ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತರಪ್ರದೇಶದ ಮೀರತ್‌ನ ಸೌರಭ್ ತನ್ನದೇ ವಿಶ್ವ ದಾಖಲೆಯನ್ನು ಮುರಿದು ಚಿನ್ನಕ್ಕೆ ಮುತ್ತಿಟ್ಟರು. ಕೊರಿಯಾದ ಲಿಮ್ ಹಾಗೂ ಭಾರತದ ಅರ್ಜುನ್ ಸಿಂಗ್ ಚೀಮಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದಾರೆ. 245.5 ಅಂಕ ಗಳಿಸಿದ ಸೌರಭ್ ಈ ವರ್ಷದ ಜೂನ್‌ನಲ್ಲಿ ತಾನೇ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಕಳೆದ ತಿಂಗಳು ಇಂಡೋನೇಶ್ಯಾದ ಪಾಲೆಂಬಾಂಗ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಸೌರಭ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲೇ ಚಿನ್ನದ ಪದಕ ಜಯಿಸಿದ್ದರು.

ಏಶ್ಯನ್ ಗೇಮ್ಸ್‌ನಲ್ಲಿ 240.5 ಅಂಕ ಗಳಿಸಿದ್ದ ಸೌರಭ್‌ಗೆ ಸ್ವರ್ಣ ಒಲಿದಿತ್ತು. ಅಭಿಷೇಕ್ ವರ್ಮಾ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News