ರಶ್ಯದ ಮಾಜಿ ಬೇಹುಗಾರನ ಮೇಲೆ ನರ್ವ್ ಗ್ಯಾಸ್ ದಾಳಿಗೆ ಪುಟಿನ್ ಹೊಣೆ: ಬ್ರಿಟನ್

Update: 2018-09-06 17:21 GMT

ಲಂಡನ್, ಸೆ.6: ಈ ವರ್ಷದ ಮಾರ್ಚ್‌ನಲ್ಲಿ ರಶ್ಯದ ಮಾಜಿ ಬೇಹುಗಾರನ ಮೇಲೆ ನಡೆದ ನರ್ವ್‌ಗ್ಯಾಸ್ ದಾಳಿಗೆ ಅಂತಿಮವಾಗಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೇ ಹೊಣೆಗಾರರೆಂದು ಬ್ರಿಟನ್‌ನ ಭದ್ರತಾ ಸಚಿವ ಬೆನ್ ವ್ಯಾಲೆಸ್ ತಿಳಿಸಿದ್ದಾರೆ.

 ರಶ್ಯದ ಮಿಲಿಟರಿ ಬೇಹುಗಾರಿಕಾ ದಳದ ಇಬ್ಬರು ಸದಸ್ಯರು, ನೊವಿಚೊಕ್ ಎಂಬ ಮಾರಣಾಂತಿಕ ರಾಸಾಯನಿಕ ಅನಿಲವನ್ನು ಬಳಸಿಕೊಂಡು, ರಶ್ಯದ ಮಾಜಿ ಗೂಢಚಾರ ಸೆರ್ಗೆಯಿ ಸ್ಕ್ರಿಪಾಲ್ ಹಾಗೂ ಅವರ ಪುತ್ರಿ ಯೂಲಿಯಾ ಅವರನ್ನು ಬ್ರಿಟನ್‌ನ ಸಾಲಿಸ್‌ಬರಿ ನಗರದಲ್ಲಿ ಹತ್ಯೆಗೈಯಲು ಯತ್ನಿಸಿದ್ದರೆಂದು ಬ್ರಿಟಿಶ್ ಸರಕಾರದ ಆಪಾದಿಸಿದೆ.

  ಲಂಡನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವ ಬೆನ್‌ವ್ಯಾಲೆಸ್ ಅವರನ್ನು ರಶ್ಯದ ಮಾಜಿ ಬೇಹುಗಾರನ ಮೇಲೆ ದಾಳಿಗೆ ಪುತಿನ್ ಹೊಣೆಗಾರರೇ ಎಂದು ಪತ್ರಕರ್ತರು ಪ್ರಶ್ನಿಸಿದ್ದರು. ಇದಕ್ಕುತ್ತರಿಸಿದ ವ್ಯಾಲೆಸ್, ‘‘ ಪುತಿನ್ ರಶ್ಯದ ಅಧ್ಯಕ್ಷ ರು ಹಾಗೂ ರಕ್ಷಣಾ ಇಲಾಖೆಯ ಮೂಲಕ ಅವರ ಸರಕಾರವು ಮಿಲಿಟರಿ ಬೇಹುಗಾರಿಕಾ ದಳವನ್ನು ನಿಯಂತ್ರಿಸುತ್ತಿದ್ದೆ, ಅದಕ್ಕೆ ನಿಧಿ ಪೂರೈಕೆ ಮಾಡುತ್ತಿದೆ’’ ಎಂದು ವ್ಯಾಲೆಸ್ ಹೇಳಿದರು.

ಪುತಿನ್ ಅವರ ತನ್ನ ಆಡಳಿತದ ಮೇಲೆ ನಿಯಂತ್ರಣ ಹೊಂದಿಲ್ಲವೆಂದಾಗಲಿ ಹಾಗೂ ಅವರ ಬೇಹುಗಾರಿಕಾ ದಳವು ಒಂದು ಪುಂಡು ಸಂಘಟನೆಯೊಂದು ಯಾರೂ ಹೇಳಲು ಸಾಧ್ಯವಿಲ್ಲ’’ ಎಂದವರು ಹೇಳಿದ್ದಾರೆ.ತನ್ನ ಪೂರ್ವಾಧಿಕಾರಿಗಳಾದ ಬರಾಕ್ ಒಬಾಮ ಹಾಗೂ ಜಾರ್ಜ್ ಡಬ್ಲು. ಬುಶ್ ಅವರಂತಲ್ಲದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತದ ಜೊತೆಗಿನ ಮಹತ್ವದ ಬಾಂಧವ್ಯವನ್ನು ಕಡೆಗಣಿಸಿದ್ದಾರೆ. ಅಮೆರಿಕ-ಭಾರತ ಬಾಂಧವ್ಯಕ್ಕೆ ಉಜ್ವಲ ಭವಿಷ್ಯವಿದೆ. ಆದರೆ ಅಮೆರಿಕವು ಈ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಹಾಗೂ ಅದನ್ನು ಕುಶಲತೆಯೊಂದಿಗೆ ಕಾರ್ಯಗತಗೊಳಿಸಬೇಕಾಗಿದೆ.

ಟಿಮ್ ರೊಮೆರ್

ಭಾರತಕ್ಕಾಗಿನ ಅಮೆರಿಕದ ಮಾಜಿ ರಾಯಭಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News