ಹೈಫಾ ವಿಮೋಚನೆಗೆ 100 ವರ್ಷ: ಹುತಾತ್ಮ ಭಾರತೀಯ ಯೋಧರಿಗೆ ವೀರನಮನ

Update: 2018-09-06 17:30 GMT

ಹೈಫಾ, ಸೆ.6: ಮೊದಲನೆ ವಿಶ್ವಮಹಾಯುದ್ಧದ ವೇಳೆ ಒಟ್ಟೊಮನ್ ಸಾಮ್ರಾಜ್ಯದ ಹಿಡಿತದಿಂದ ತಾನು ವಿಮೋಚನೆಗೊಂಡ 100ನೇ ವರ್ಷಾಚರಣೆಯನ್ನು ಇಸ್ರೇಲಿನ ಕರಾವಳಿ ನಗರವಾದ ಹೈಫಾ ಗುರುವಾರ ಆಚರಿಸಿದೆ. ಹೈಫಾ ನಗರದ ವಿಮೋಚನೆಗಾಗಿ ಪ್ರಾಣಾರ್ಪಣೆ ಮಾಡಿದ ಭಾರತೀಯ ಯೋಧರಿಗೆ ಈ ಸಂದರ್ಭದಲ್ಲಿ ವೀರನಮನ ಸಲ್ಲಿಸಲಾಯಿತು.

1918ರಲ್ಲಿ ಹೈಫಾ ನಗರದಲ್ಲಿ ನಡೆದ ಭೀಕರ ಕದನದಲ್ಲಿ ಆಗಿನ ಬ್ರಿಟಿಶ್ ಭಾರತೀಯ ಸೇನೆಗೆ ಸೇರಿದ ಮೈಸೂರು, ಹೈದರಾಬಾದ್ ಹಾಗೂ ಜೋಧಪುರದ ಆಶ್ವಾರೋಹಿ ರೆಜಿಮೆಂಟ್‌ಗಳ ಸೈನಿಕರು ಧೀರೋದಾತ್ತವಾಗಿ ಒಟ್ಟೊಮನ್ ಸಾಮ್ರಾಜ್ಯದ ಸೈನಿಕರೊಂದಿಗೆ ಕಾದಾಡಿ, ಹೈಫಾ ಪಟ್ಟಣವನ್ನು ವಿಮೋಚನೆಗೊಳಿಸಿದ್ದರು.

ಆ ಯುದ್ಧದಲ್ಲಿ ಪಾಲ್ಗೊಂಡಿದ್ದ ವೀರ ಭಾರತೀಯ ಯೋಧರಾದ ಕ್ಯಾಪ್ಟನ್ ಅಮಾನ್ ಸಿಂಗ್ ಬಹಾದೂರ್ ಹಾಗೂ ದಫಾದಾರ್ ಜೊರ್ ಸಿಂಗ್ ಅವರಿಗೆ ಮರಣೋತ್ತರ ಆರ್ಡರ್ ಆಫ್ ಮೆರಿಟ್ ಹಾಗೂ ಕ್ಯಾಪ್ಟನ್ ಅನೂಪ್ ಸಿಂಗ್ ಹಾಗೂ 2ನೇ ಲೆ. ಸಗತ್ ಸಿಂಗ್ ಮತ್ತು ಮೇಡರ್ ದಲ್‌ಪತ್‌ಸಿಂಗ್ ಅವರಿಗೆ ಮರಣೋತ್ತರ ಮಿಲಿಟರಿ ಕ್ರಾಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೈಫಾ ಕದನದಲ್ಲಿ ಮಡಿದ ಸುಮಾರು 900 ಮಂದಿ ಭಾರತೀಯ ಯೋಧರನ್ನು ಜೆರುಸಲೇಂ,ರಾಮ್ಲೆ ಹಾಗೂ ಹೈಫಾದ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದು,ಅವರ ಸ್ಮರಣಾರ್ಥವಾಗಿ ಸ್ಮಾರಕಗಳನ್ನು ಸ್ತಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News