ಶುಐಬ್ ಅಖ್ತರ್ ರಾಜೀನಾಮೆ

Update: 2018-09-06 18:13 GMT

ಕರಾಚಿ, ಸೆ.6: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷರ ಸಲಹೆಗಾರ ಹುದ್ದೆಗೆ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ರಾಜೀನಾಮೆ ನೀಡಿದ್ದಾರೆ.

ಪಿಸಿಬಿ ಅಧ್ಯಕ್ಷ ನಜೀಮ್ ಸೇಥಿ ಅವರಿಗೆ ಅಖ್ತರ್ ಸಲಹೆಗಾರರಾಗಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರ ಬದಲಾವಣೆಯ ಬೆನ್ನಲ್ಲೇ ಅಖ್ತರ್ ರಾಜೀನಾಮೆ ನೀಡಿದ್ದಾರೆ.

‘‘ಪಿಸಿಬಿ ಅಧ್ಯಕ್ಷರ ಬದಲಾವಣೆಯಾಗಿರುವುದರಿಂದ ಇನ್ನು ಅಧ್ಯಕ್ಷರ ಸಲಹೆಗಾರ ಹುದ್ದೆಯಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ’’ ಎಂದು ಅಖ್ತರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News