ಸತತ 11ನೇ ಬಾರಿ ಸೆಮಿಫೈನಲ್ ತಲುಪಿದ ಜೊಕೊವಿಕ್

Update: 2018-09-06 18:20 GMT

ನ್ಯೂಯಾರ್ಕ್, ಸೆ.6: ಸರ್ಬಿಯ ಆಟಗಾರ ನೊವಾಕ್ ಜೊಕೊವಿಕ್ 55ನೇ ರ್ಯಾಂಕಿನ ಜಾನ್ ಮಿಲ್ಮನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಸತತ 11ನೇ ಬಾರಿ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್‌ಗೆ ಶಾಕ್ ನೀಡಿದ್ದ ಶ್ರೇಯಾಂಕರಹಿತ ಆಟಗಾರ ಮಿಲ್ಮನ್ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ ವಿರುದ್ಧ 3-6, 4-6, 4-6 ಸೆಟ್‌ಗಳ ಅಂತರದಿಂದ ಶರಣಾದರು. ಕಳೆದ ವರ್ಷ ಬಲಮೊಣಕೈ ನೋವಿನಿಂದಾಗಿ ಯುಎಸ್ ಓಪನ್‌ನಿಂದ ದೂರ ಸರಿದಿದ್ದ 13 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಇದೀಗ 3ನೇ ಬಾರಿ ಚಾಂಪಿಯನ್‌ಶಿಪ್ ಜಯಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಆರನೇ ಶ್ರೇಯಾಂಕದ ಜೊಕೊವಿಕ್ ಜುಲೈನಲ್ಲಿ ವಿಂಬಲ್ಡನ್ ಚಾಂಪಿಯನ್‌ಶಿಪ್ ಜಯಿಸಿದ್ದರು. ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ 2014ರ ಯುಎಸ್ ಓಪನ್ ರನ್ನರ್ಸ್-ಅಪ್ ಕೀ ನಿಶಿಕೊರಿಯವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News