ಅಮೆರಿಕ ಗುರುದ್ವಾರದಲ್ಲಿ ಘರ್ಷಣೆ: ಇನ್ನೂ 27 ಮಂದಿ ವಿರುದ್ಧ ಮೊಕದ್ದಮೆ

Update: 2018-09-07 16:24 GMT

ವಾಶಿಂಗ್ಟನ್, ಸೆ. 7: ಅಮೆರಿಕದ ಗ್ರೀನ್‌ವುಡ್ ಗುರುದ್ವಾರದಲ್ಲಿ ಎಪ್ರಿಲ್ 15ರಂದು ನಡೆದ ಘರ್ಷಣೆಗೆ ಸಂಬಂಧಿಸಿ ಇನ್ನೂ 27 ಮಂದಿಯ ವಿರುದ್ಧ ಜಾನ್‌ಸನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಮೊಕದ್ದಮೆ ದಾಖಲಿಸಿದೆ ಎಂದು ‘ಫಾಕ್ಸ್59.ಕಾಮ್’ ವರದಿ ಮಾಡಿದೆ.

ಇಂಡಿಯಾನಪೊಲಿಸ್‌ನ ದಕ್ಷಿಣಕ್ಕಿರುವ ಗ್ರೀನ್‌ವುಡ್ ನಗರದಲ್ಲಿ ಸಂಭವಿಸಿದ ಮಾತಿನ ಚಕಮಕಿ ಹಾಗೂ ದೈಹಿಕ ಹೊಡೆದಾಟಕ್ಕೆ ಸಂಬಂಧಿಸಿದ ಆರೋಪಿಗಳ ಸಂಖ್ಯೆ ಈಗ 45 ಆಗಿದೆ. ಘರ್ಷಣೆಯಲ್ಲಿ ಸುಮಾರು 150 ಮಂದಿ ಭಾಗಿಯಾಗಿದ್ದರು.

ಜುಲೈಯಲ್ಲಿ 18 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.

ಎರಡು ವರ್ಷಗಳಿಗೊಮ್ಮೆ ನಡೆಯುವ ಗುರುದ್ವಾರದ ಆಡಳಿತ ಮಂಡಳಿಯ ಬದಲಾವಣೆ ಸಂದರ್ಭದಲ್ಲಿ ಘರ್ಷಣೆ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News