ಅಫ್ಘಾನ್‌ಗೆ ಮ್ಯಾಟಿಸ್ ಅಘೋಷಿತ ಭೇಟಿ

Update: 2018-09-07 16:25 GMT

ಕಾಬೂಲ್, ಸೆ. 7: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಶುಕ್ರವಾರ ಅಫ್ಘಾನಿಸ್ತಾನಕ್ಕೆ ಅಘೋಷಿತ ಭೇಟಿ ನೀಡಿದ್ದಾರೆ.

 ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನಿಕರು ತಾಲಿಬಾನ್ ಉಗ್ರ ಸಂಘಟನೆಯ ವಿರುದ್ಧ ಹೋರಾಡುತ್ತಿದ್ದಾರೆ.

ತಾಲಿಬಾನನ್ನು ಮಾತುಕತೆಯ ಮೇಜಿಗೆ ಕರೆತರಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಹೊತ್ತಿನಲ್ಲೇ ಅವರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಅಫ್ಘಾನ್ ಮತ್ತು ಅಂತಾರಾಷ್ಟ್ರೀಯ ಭಾಗೀದಾರರು ತಾಲಿಬಾನ್ ಜೊತೆ ಶಾಂತಿ ಮಾತುಕತೆ ನಡೆಸಲು ತೀವ್ರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆಯು ತಾಲಿಬಾನ್ ಜೊತೆ 17 ವರ್ಷಗಳಿಂದ ಯುದ್ಧದಲ್ಲಿ ತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News