ಜಪಾನ್ ಭೂಕುಸಿತ: ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ

Update: 2018-09-07 16:46 GMT

ಟೋಕಿಯೊ, ಸೆ. 7: ಜಪಾನ್‌ನಲ್ಲಿ ಗುರುವಾರ ಪ್ರಬಲ ಭೂಕಂಪದ ಬಳಿಕ ಸಂಭವಿಸಿದ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಕರ್ತರು ಬುಲ್‌ಡೋಝರ್‌ಗಳು ಮತ್ತು ನಾಯಿಗಳೊಂದಿಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಭೂಕುಸಿತದಿಂದಾಗಿ ಹಲವಾರು ಮನೆಗಳು ಭೂಸಮಾಧಿಯಾಗಿದ್ದು, ಮೃತರ ಸಂಖ್ಯೆ 18ಕ್ಕೇರಿದೆ.

ಗ್ರಾಮೀಣ ಪಟ್ಟಣ ಅಸ್ತೂಮದಲ್ಲಿ ಇನ್ನೂ 22 ಮಂದಿ ನಾಪತ್ತೆಯಾಗಿದ್ದಾರೆ.

ಗುರುವಾರ ಮುಂಜಾನೆ ಸಂಭವಿಸಿದ, ರಿಕ್ಟರ್ ಮಾಪಕದಲ್ಲಿ 6.6ರಷ್ಟಿದ್ದ ಭೂಕಂಪದಿಂದಾಗಿ ಗುಡ್ಡದ ಭಾಗವೊಂದು ಕುಸಿದು ಪಕ್ಕದ ಊರಿನಲ್ಲಿದ್ದ ಹಲವಾರು ಮನೆಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ.

‘‘ಮಣ್ಣಿನಡಿಯಲ್ಲಿ ಈಗಲೂ ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ನಾವು 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ. ಆದರೆ, ಅವರನ್ನು ರಕ್ಷಿಸಲು ಕಷ್ಟವಾಗುತ್ತಿದೆ’’ ಎಂದು ರಕ್ಷಣಾ ಅಧಿಕಾರಿಯೊಬ್ಬರು ಅಸ್ತೂಮ ನಗರದಲ್ಲಿ ಎನ್‌ಎಚ್‌ಕೆ ಸುದ್ದಿ ಚಾನೆಲ್‌ನೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News