ಸಂಧಾನ ನಡೆಸುವಂತೆ ಅಮೆರಿಕದಿಂದ ನಿರಂತರ ಸಂದೇಶ: ಇರಾನ್ ಅಧ್ಯಕ್ಷ ಹಸನ್ ರೂಹಾನಿ

Update: 2018-09-08 16:36 GMT

ಜಿನೇವ, ಸೆ. 8: ಸಂಧಾನ ಆರಂಭಿಸುವಂತೆ ಅಮೆರಿಕ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಹೇಳಿದ್ದಾರೆ.

ಇರಾನ್ ಜಾಗತಿಕ ಶಕ್ತ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಪರಮಾಣು ಒಪ್ಪಂದದಿಂದ ಮೇ ತಿಂಗಳಲ್ಲಿ ಟ್ರಂಪ್ ಆಡಳಿತದ ಅಮೆರಿಕ ಹೊರಬಂದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ನೆಲೆಸಿರುವುದನ್ನು ಸ್ಮರಿಸಬಹುದಾಗಿದೆ.

ಒಪ್ಪಂದದಿಂದ ಹೊರಬಂದ ಕೂಡಲೇ ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸಿದ್ದಾರೆ.

ತಾನು ಇರಾನ್ ನಾಯಕರನ್ನು ಭೇಟಿಯಾಗುವುದಾಗಿ ಟ್ರಂಪ್ ಹೇಳಿದ್ದಾರೆ.

‘‘ಒಂದು ಕಡೆ ಅವರು ಇರಾನ್‌ನ ಜನರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಾರೆ. ಇನ್ನೊಂದು ಕಡೆ, ನಾವು ಜೊತೆಯಾಗಿ ಮಾತುಕತೆ ನಡೆಸಬೇಕೆಂಬ ಸಂದೇಶಗಳನ್ನು ವಿವಿಧ ವಿಧಾನಗಳ ಮೂಲಕ ಪ್ರತಿದಿನವೆಂಬಂತೆ ಕಳುಹಿಸುತ್ತಾರೆ’’ ಎಂದು ರೂಹಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News