ಐದನೇ ಟೆಸ್ಟ್: ಸಂಕಷ್ಟದಲ್ಲಿ ಭಾರತ

Update: 2018-09-08 18:18 GMT

 ಲಂಡನ್, ಸೆ.8: ಇಂಗ್ಲೆಂಡ್ ಬೌಲರ್‌ಗಳಾದ ಜೇಮ್ಸ್ ಆ್ಯಂಡರ್ಸನ್ ಹಾಗೂ ಬೆನ್ ಸ್ಟೋಕ್ಸ್ ದಾಳಿಗೆ ನಲುಗಿದ ಭಾರತ ಐದನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

 ಇಂಗ್ಲೆಂಡ್‌ನ 332 ರನ್‌ಗೆ ಉತ್ತರಿಸಹೊರಟ ಭಾರತ 2ನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 51 ಓವರ್‌ಗಳಲ್ಲಿ 174 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ.

  ಭಾರತದ ಪರ ನಾಯಕ ವಿರಾಟ್ ಕೊಹ್ಲಿ 49 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದರು. ಕೆಎಲ್ ರಾಹುಲ್ ಹಾಗೂ ಚೇತೇಶ್ವರ ಪೂಜಾರ ತಲಾ 37 ರನ್ ಗಳಿಸಿದರು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಶಿಖರ್ ಧವನ್(3) ಔಟಾದರು. ಆಗ 2ನೇ ವಿಕೆಟ್‌ಗೆ 64 ರನ್ ಸೇರಿಸಿದ ರಾಹುಲ್-ಪೂಜಾರ ಜೋಡಿ ತಂಡವನ್ನು ಆಧರಿಸಲು ಯತ್ನಿಸಿತು. ಆದರೆ, ಈ ಜೋಡಿಯನ್ನು ಕರನ್ ಬೇರ್ಪಡಿಸಿದರು.

ಪೂಜಾರ, ಅಜಿಂಕ್ಯ ರಹಾನೆ ಬೆನ್ನುಬೆನ್ನಿಗೆ ಔಟಾದರು. ಆಗ 5ನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ಹನುಮ ವಿಹಾರಿ ತಂಡಕ್ಕೆ ಆಸರೆಯಾದರು. ಕೊಹ್ಲಿ ವಿಕೆಟ್ ಪಡೆದ ಸ್ಟೋಕ್ಸ್ ಭಾರತಕ್ಕೆ ಶಾಕ್ ನೀಡಿದರು. ಚೊಚ್ಚಲ ಪಂದ್ಯವನ್ನಾಡಿದ ವಿಹಾರಿ ಔಟಾಗದೆ 25 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ಪರ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್(2-20) ಹಾಗೂ ಸ್ಟೋಕ್ಸ್(2-44)ತಲಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೆ ಮೊದಲು ಜೋಸ್ ಬಟ್ಲರ್ ಹಾಗೂ ಸ್ಟುವರ್ಟ್ ಬ್ರಾಡ್ ಸಾಹಸದಿಂದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 332 ರನ್ ಗಳಿಸಿ ಆಲೌಟಾಗಿದೆ.

ಶನಿವಾರ 7 ವಿಕೆಟ್‌ಗಳ ನಷ್ಟಕ್ಕೆ 198 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಪರ ಬಟ್ಲರ್ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್ ಮುಂದುವರಿಸಿದರು. ಈ ಇಬ್ಬರು 8ನೇ ವಿಕೆಟ್‌ಗೆ 33 ರನ್ ಸೇರಿಸಿದರು.

ಜಸ್‌ಪ್ರಿತ್ ಬುಮ್ರಾ ಅವರು ರಶೀದ್(15) ವಿಕೆಟ್ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಆಗ ಬಟ್ಲರ್‌ರೊಂದಿಗೆ ಕೈಜೋಡಿಸಿದ ಸ್ಟುವರ್ಟ್ ಬ್ರಾಡ್(38, 59 ಎಸೆತ, 3 ಬೌಂಡರಿ)9ನೇ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.

ಬ್ರಾಡ್ ವಿಕೆಟ್ ಉಡಾಯಿಸಿದ ಜಡೇಜ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಟ್ಲರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10ನೇ ಅರ್ಧಶತಕ ದಾಖಲಿಸಿದರು. 89 ರನ್‌ಗೆ ಔಟಾಗಿ ಶತಕ ವಂಚಿತರಾದ ಬಟ್ಲರ್ 133 ಎಸೆತಗಳನ್ನು ಎದುರಿಸಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಬಟ್ಲರ್ ವಿಕೆಟ್ ಉರುಳಿಸಿದ ರವೀಂದ್ರ ಜಡೇಜ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು. ಆ್ಯಂಡರ್ಸನ್ ಔಟಾಗದೆ 6 ರನ್ ಗಳಿಸಿದರು.

ಭಾರತದ ಪರ ವೇಗದ ಬೌಲರ್‌ಗಳಾದ ಬುಮ್ರಾ(3-83) ಹಾಗೂ ಇಶಾಂತ್ ಶರ್ಮಾ(3-62) ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, 79 ರನ್‌ಗೆ 4 ವಿಕೆಟ್ ಉಡಾಯಿಸಿದ ಜಡೇಜ ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್ ವಿವರ

ಇಂಗ್ಲೆಂಡ್: 122 ಓವರ್‌ಗಳಲ್ಲಿ 332/10

ಅಲಿಸ್ಟೈರ್ ಕುಕ್ ಬಿ ಬುಮ್ರಾ 71

ಜೆನ್ನಿಂಗ್ಸ್ ಸಿ ರಾಹುಲ್ ಬಿ ಜಡೇಜ 23

ಮೊಯಿನ್ ಅಲಿ ಸಿ ಪಂತ್ ಬಿ ಇಶಾಂತ್ 50

ಜೋ ರೂಟ್ ಎಲ್ಬಿಡಬ್ಲು ಬುಮ್ರಾ 00

ಬೈರ್‌ಸ್ಟೋವ್ ಸಿ ಪಂತ್ ಬಿ ಇಶಾಂತ್ 00

ಸ್ಟೋಕ್ಸ್ ಎಲ್ಬಿಡಬ್ಲು ಜಡೇಜ 11

ಜೋಸ್ ಬಟ್ಲರ್ ಸಿ ರಶೀದ್ ಬಿ ಜಡೇಜ 89

ಕರನ್ ಸಿ ಪಂತ್ ಬಿ ಇಶಾಂತ್ 00

ರಶೀದ್ ಎಲ್ಬಿಡಬ್ಲು ಬುಮ್ರಾ 15

ಸ್ಟುವರ್ಟ್ ಬ್ರಾಡ್ ಸಿ ರಾಹುಲ್ ಬಿ ಜಡೇಜ 38

ಆ್ಯಂಡರ್ಸನ್ ಅಜೇಯ 00

ಇತರೆ 36

ವಿಕೆಟ್ ಪತನ: 1-60, 2-133, 3-133, 4-134, 5-171, 6-177, 7-181, 8-214, 9-312, 10-332.

ಬೌಲಿಂಗ್ ವಿವರ:

ಜಸ್‌ಪ್ರಿತ್ ಬುಮ್ರಾ 30-09-83-3

ಇಶಾಂತ್ ಶರ್ಮಾ 31-12-62-3

ಹನುಮ ವಿಹಾರಿ 1-0-1-0

ಮುಹಮ್ಮದ್ ಶಮಿ 30-07-72-0

ರವೀಂದ್ರ ಜಡೇಜ 30-0-79-4.

ಭಾರತ ಮೊದಲ ಇನಿಂಗ್ಸ್: 51 ಓವರ್‌ಗಳಲ್ಲಿ 174/6

ಕೆಎಲ್ ರಾಹುಲ್ ಬಿ ಕರನ್ 37

ಶಿಖರ್ ಧವನ್ ಎಲ್ಬಿಡಬ್ಲು 03

ಪೂಜಾರ ಸಿ ಬೈರ್‌ಸ್ಟೋವ್ ಬಿ ಆ್ಯಂಡರ್ಸನ್ 37

ವಿರಾಟ್ ಕೊಹ್ಲಿ ಸಿ ರೂಟ್ ಬಿ ಸ್ಟೋಕ್ಸ್ 49

ಅಜಿಂಕ್ಯ ರಹಾನೆ ಸಿ ಕುಕ್ ಬಿ ಆ್ಯಂಡರ್ಸನ್ 00

ಹನುಮ ವಿಹಾರಿ ಔಟಾಗದೆ 25

ರಿಷಭ್ ಪಂತ್ ಸಿ ಕುಕ್ ಬಿ ಸ್ಟೋಕ್ಸ್ 05

ರವೀಂದ್ರ ಜಡೇಜ ಔಟಾಗದೆ 08

ವಿಕೆಟ್ ಪತನ: 1-6,2-70, 3-101, 4-103, 5-154, 6-160

ಬೌಲಿಂಗ್ ವಿವರ

ಜೇಮ್ಸ್ ಆ್ಯಂಡರ್ಸನ್ 11-3-20-2

ಸ್ಟುವರ್ಟ್ ಬ್ರಾಡ್ 11-3-25-1

ಬೆನ್ ಸ್ಟೋಕ್ಸ್ 11-1-44-2

ಕರನ್ 10-1-46-1

ಮೊಯಿನ್ ಅಲಿ 8-0-29-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News