ವಾಟ್ಸ್‌ಆ್ಯಪ್‌ನಿಂದ ಮುರಿದು ಬಿದ್ದ ಮದುವೆ!

Update: 2018-09-09 05:36 GMT

ಲಕ್ನೋ, ಸೆ.9: ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿರುವ ಕುಟುಂಬವೊಂದು ವಧು ವಾಟ್ಸ್‌ಆ್ಯಪ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾಳೆ ಎಂಬ ಕಾರಣ ನೀಡಿ ಮದುವೆಯನ್ನೇ ರದ್ದುಪಡಿಸಿರುವ ಒಂದು ಅಪರೂಪದ ಘಟನೆ ನಡೆದಿದೆ.

 ಮದುಮಗಳು ಹಾಗೂ ಅವರ ಸಂಬಂಧಿಕರು, ಸ್ನೇಹಿತರು ಮದುವೆ ಮನೆಗೆ ಬಂದು ವರನ ಕಡೆಯವರ ಬರುವಿಕೆಗಾಗಿ ಕಾದುಕುಳಿತ್ತಿದ್ದರು. ವಧುವಿನ ತಂದೆಗೆ ಫೋನ್ ಮಾಡಿದ ವರನ ಕಡೆಯವರು ನಿಮ್ಮ ಮಗಳು ಹೆಚ್ಚಿನ ಸಮಯ ವಾಟ್ಸ್‌ಆ್ಯಪ್‌ನಲ್ಲೇ ಕಳೆಯುತ್ತಾಳೆ. ಹೀಗಾಗಿ ಈ ಮದುವೆ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿ ಮದುವೆ ರದ್ದುಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಧುವಿನ ಕಡೆಯವರು ವರನ ಕಡೆಯವರ ಆರೋಪವನ್ನು ನಿರಾಕರಿಸಿದ್ದು, ಕೊನೆಯ ಕ್ಷಣದಲ್ಲಿ ಮದುವೆ ರದ್ದುಪಡಿಸಲು ವರದಕ್ಷಿಣೆಯ ಬೇಡಿಕೆಯೇ ಕಾರಣ ಎಂದು ದೂರಿದ್ದಾರೆ.

 ವಧುವಿನ ತಂದೆ ವರನ ಮನೆಯವರ ವಿರುದ್ಧ ಕೇಸ್ ದಾಖಲಿಸಿದ್ದು, ನಮ್ಮ ಬಳಿ 65 ಲಕ್ಷ ರೂ. ವರದಕ್ಷಿಣೆ ನೀಡಲು ಬೇಡಿಕೆ ಇಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News