ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

Update: 2018-09-10 07:46 GMT

ಹೊಸದಿಲ್ಲಿ, ಸೆ.10: ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ವಿಪಕ್ಷ ಕಾಂಗ್ರೆಸ್  ನೀಡಿರುವ ' ಭಾರತ್ ಬಂದ್ ' ಅಂಗವಾಗಿ ಕೇಂದ್ರ ಸರಕಾದ ವಿರುದ್ಧ ಪ್ರತಿಭಟನೆ ದೇಶದ ಎಲ್ಲಡೆ ನಡೆಯುತ್ತಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಜಾಸ್ತಿಯಾಗಿದೆ.

ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಧಾರಣೆ  ಲೀಟರ್ ಗೆ 23 ಪೈಸೆ ಮತ್ತು ಡೀಸೆಲ್ ಬೆಲೆ 22 ಪೈಸೆ ಜಾಸ್ತಿಯಾಗಿದೆ. ಪೆಟ್ರೋಲ್ ಧಾರಣೆ ಲೀಟರ್ ಗೆ 80. 73 ರೂ. ಮತ್ತು ಡೀಸೆಲ್ ಬೆಲೆ ರೂ. 72.83ಗೆ ತಲುಪಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News